Home » Gujarat: ಡಾ. ಆರ್. ಕೆ. ನಾಯರ್ ನಿರ್ಮಾಣದ ಸ್ಮೃತಿ ವನಕ್ಕೆ ಭೇಟಿ ನೀಡಿದ ರಾಷ್ಟ್ರಪತಿ; ಸುಳ್ಯದ ಸಾಧಕನಿಗೆ ಹೆಮ್ಮೆಯ ಕ್ಷಣ

Gujarat: ಡಾ. ಆರ್. ಕೆ. ನಾಯರ್ ನಿರ್ಮಾಣದ ಸ್ಮೃತಿ ವನಕ್ಕೆ ಭೇಟಿ ನೀಡಿದ ರಾಷ್ಟ್ರಪತಿ; ಸುಳ್ಯದ ಸಾಧಕನಿಗೆ ಹೆಮ್ಮೆಯ ಕ್ಷಣ

by ಕಾವ್ಯ ವಾಣಿ
0 comments

Gujarat: ಗುಜರಾತ್ (Gujarat) ರಾಜ್ಯದ ಕಳ್ ಜಿಲ್ಲೆಯ ಭುಜ್ ನಲ್ಲಿ ಭೂಕಂಪ ಸಂತ್ರಸ್ತರ ನೆನಪಲ್ಲಿ ನಿರ್ಮಾಣಗೊಂಡಿರುವ ಸ್ಮೃತಿ ವನಕ್ಕೆ ಇಂದು ರಾಷ್ಟ್ರ ಪತಿ ದೌಪತಿ ಮುರ್ಮು ಭೇಟಿ ನೀಡಿದರು. ಇಲ್ಲಿ ಗ್ರೀನ್ ಹೀರೋ ಆಫ್ ಇಂಡಿಯಾ, ಸುಳ್ಯದವರಾದ ಡಾ. ಆರ್. ಕೆ. ನಾಯರ್ ಅತಿ ದೊಡ್ಡ ಮಿಯಾವಿಕಿ ಅರಣ್ಯ ಬೆಳೆಸಿದ್ದು ಇದನ್ನು ವೀಕ್ಷಿಸಿದ ರಾಷ್ಟ್ರ ಪತಿಗಳು ಖುಷಿಪಟ್ಟರು. ಅಲ್ಲಿ ಗಿಡಗಳನ್ನೂ ನೆಟ್ಟರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ಮೃತಿ ವನವನ್ನು ಲೋಕಾರ್ಪಣೆಗೊಳಿಸಿದ್ದರು. ಗಿಡ ನೆಡುವ ಕಾರ್ಯದಲ್ಲಿ ಎಲ್ಲ ಕೆಲಸಗಳಿಗೂ ಮಣ್ಣಿನ ಮಡಿಕೆ, ಜಗ್, ಚಟ್ಟಿಗಳನ್ನೇ ಬಳಸಿ ಮಣ್ಣನ್ನೇ ಬಳಸುವ ಮೂಲಕ ಒಳ್ಳೆಯ ಪರಿಸರ ಸಂದೇಶ ನೀಡಿದ್ದೇವೆ ಎಂದು ಡಾ. ಆರ್.ಕೆ. ನಾಯರ್ ಅವರು ಸಂತಸ ಹಂಚಿಕೊಂಡಿದ್ದಾರೆ.

You may also like