Home » Divorce: ಅಸಹಜ ಲೈಂಗಿಕ ಕ್ರಿಯೆಗೆ ಒತ್ತಡ; ಪತ್ನಿಯ ಕಾಟಕ್ಕೆ ಬೇಸತ್ತು ಡಿವೋರ್ಸ್‌ ಕೊಟ್ಟ ಪತಿ

Divorce: ಅಸಹಜ ಲೈಂಗಿಕ ಕ್ರಿಯೆಗೆ ಒತ್ತಡ; ಪತ್ನಿಯ ಕಾಟಕ್ಕೆ ಬೇಸತ್ತು ಡಿವೋರ್ಸ್‌ ಕೊಟ್ಟ ಪತಿ

0 comments

Divorce Case: ಅಶ್ಲೀಲ ವೀಡಿಯೋ ನೋಡಿ ಅದೇ ರೀತಿ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯ ಮಾಡಿದ ಪತ್ನಿಗೆ ಪತಿಯೋರ್ವ ವಿಚ್ಛೇದನ ನೀಡಿದ್ದಾನೆ.

ಪತ್ನಿ ಅಶ್ಲೀಲ ವೀಡಿಯೋ ನೋಡುವುದರ ಚಟಕ್ಕೆ ಬಿದ್ದಿದ್ದು, ಈಕೆಯ ಲೈಂಗಿಕ ಒತ್ತಾಯಕ್ಕೆ ಬೇಸತ್ತು ಕೌಟುಂಬಿಕ ನ್ಯಾಯಾಲಯದ ಮೊರೆ ಹೋದ ಪತಿ ಅಲ್ಲಿ ನ್ಯಾಯಾಲಯವು ವಿಚ್ಛೇದನ ತೀರ್ಪು ನೀಡಿದ್ದು, ಇದರ ವಿರುದ್ಧ ಪತ್ನಿ ಪಂಜಾಬ್‌-ಹರಿಯಾಣ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾಳೆ. ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಇದೀಗ ಹೈಕೋರ್ಟ್‌ ಎತ್ತಿ ಹಿಡಿದಿದ್ದು, ಕೌಟುಂಬಿಕ ನ್ಯಾಯಾಲಯದ ತೀರ್ಪು ಸರಿ ಇದೆ ಎಂದು ಆದೇಶ ನೀಡಿದೆ.

ಹರಿಯಾಣದ ಈ ದಂಪತಿಗಳು 2017 ರಲ್ಲಿ ಮದುವೆಯಾಗಿದ್ದು, ಇವರ ನಡುವೆ ಯಾವುದೇ ಸಮಸ್ಯೆ ಇರಲಿಲ್ಲ. ನಂತರ ಪತ್ನಿ ಮೊಬೈಲ್‌ ಗೇಮ್ಸ್‌, ಪೋರ್ನ್‌ ವೀಡಿಯೋ ನೋಡುವ ಅಭ್ಯಾಸ ಮಾಡಿ, ಅಸಹಜ ರೀತಿಯ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುತ್ತಿದ್ದಳು. ಹೀಗಾಗಿ ಪತ್ನಿಯಿಂದ ವಿಚ್ಛೇದನ ಕೋರಿ ಪತಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

You may also like

Leave a Comment