Home » ನಿದ್ದೆಗೆಟ್ಟು, ರಾತ್ರಿಯಿಡೀ ಕೂತು ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೀಕ್ಷಿಸಿದ ಪ್ರಧಾನಿ ಮೋದಿ!

ನಿದ್ದೆಗೆಟ್ಟು, ರಾತ್ರಿಯಿಡೀ ಕೂತು ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೀಕ್ಷಿಸಿದ ಪ್ರಧಾನಿ ಮೋದಿ!

0 comments
PM Modi

New delhi: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದ ಉಗ್ರ ಸಂಘಟನೆಗಳ 9 ಶಿಬಿರಗಳ ಮೇಲೆ ರಾತ್ರೋ ರಾತ್ರಿ ಕ್ಷಿಪಣಿ ದಾಳಿ ನಡೆಸಿದೆ. ಆಪರೇಷನ್ ಸಿಂಧೂರ್ ಎಂಬ ಹೆಸರಿನಲ್ಲಿ ನಡೆದ ಈ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾತ್ರಿಯಿಡೀ ಕೂತು ಕಾರ್ಯಾಚರಣೆಯ ಮೇಲೆ ನಿಗಾ ಇಟ್ಟಿದ್ದರು ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ತಿಳಿಸಿದೆ.

ಈ ಹಿಂದೆ ಅಮೆರಿಕಾದ ಅವಳಿ ಟವರ್ ಗಳ ಮೇಲೆ ಸೆಪ್ಟೆಂಬರ್ 11 ನಂದು ಅಲ್ ಖಾಯಿದಾ ದಾಳಿ ನಡೆಸಿದಾಗ 2,996 ಜನರು ಮೃತಪಟ್ಟಿದ್ದರು. ಆ ದಾಳಿಗೆ ಪ್ರತೀಕಾರವಾಗಿ ಅಮೆರಿಕಾ ಬಿನ್ ಲಾಡೆನ್ ನನ್ನು ಬೇಟೆಯಾಡಿ ಕೊಂದಿತ್ತು. ಆಗ ಅಮೆರಿಕಾ ಅಧ್ಯಕ್ಷರು ರಾತ್ರಿಯಿಡೀ ಕೂತು ಲೈವ್ ಆಗಿ ಲಾಡೆನ್ ಸಾವನ್ನು ಬರಮಾಡಿಕೊಂಡಿದ್ದರು. ಅದೇ ರೀತಿಯಲ್ಲಿ ನಿನ್ನೆ ಭಾರತದ ಪ್ರಧಾನಿ ಮೋದಿಯವರು ರಾತ್ರಿಯಿಡೀ ಕಾರ್ಯಾಚರಣೆ ವೀಕ್ಷಿಸಿದ್ದಾರೆ ಎಂಬ ಮಾಹಿತಿ ಲಭ್ಯ ಆಗಿದೆ.

ಸರ್ಕಾರದ ಮೂಲಗಳ ಪ್ರಕಾರ, ‘ಪ್ರಧಾನಿ ಮೋದಿಯವರು ದಾಳಿಯ ಕುರಿತು ಇಂಚಿಂಚೂ ಮಾಹಿತಿಯನ್ನು ಪಡೆದಿದ್ದಾರೆ ಎನ್ನಲಾಗಿದೆ. ರಕ್ಷಣಾ ಪಡೆಗಳ ಮುಖ್ಯಸ್ಥರು, ಹಿರಿಯ ಗುಪ್ತಚರ ಅಧಿಕಾರಿಗಳು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ ರವರು ಪ್ರಧಾನಿ ಮೋದಿಗೆ ನಿರಂತರವಾಗಿ ಮಾಹಿತಿ ನೀಡಿದ್ದಾರೆ. ಮಂಗಳವಾರ ರಾತ್ರಿ ಶುರುವಾಗಿ ಬುಧವಾರದ ಬೆಳಗಿನ ಜಾವದವರೆಗೂ ಪ್ರಧಾನಿ ಮತ್ತು ಭೂಸೇನೆ, ನೌಕಾಪಡೆ ಮತ್ತು ವಾಯುಸೇನೆಯ ಮುಖ್ಯಸ್ಥರ ನಡುವೆ ಸಂವಹನ ನಡೆಸಿದ್ದಾರೆ ಎಂದು ಹೇಳಲಾಗಿದೆ.

You may also like