Home » PM Modi Bodyguard: ಪ್ರಧಾನಿ ಮೋದಿಗೆ ಮೊದಲ ಮಹಿಳಾ “ಬಾಡಿಗಾರ್ಡ್”-‌ ಯಾರು ಈ ಖದರ್ ಲೇಡಿ !?

PM Modi Bodyguard: ಪ್ರಧಾನಿ ಮೋದಿಗೆ ಮೊದಲ ಮಹಿಳಾ “ಬಾಡಿಗಾರ್ಡ್”-‌ ಯಾರು ಈ ಖದರ್ ಲೇಡಿ !?

0 comments

PM Modi Bodyguard: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇತ್ತೀಚೆಗೆ ಯುನೈಟೆಡ್ ಕಿಂಗ್‌ಡಮ್‌ಗೆ ಭೇಟಿ ನೀಡಿದ್ದರು. ಈ ಸಂದರ್ಭ ಅತ್ಯಂತ ಹೆಚ್ಚು ಗಮನ ಸೆಳೆದದ್ದು ಎಂದರೆ ಅದು ಮೋದಿ ಅವರ ಮೊದಲ ಮಹಿಳಾ ಬಾಡಿ ಗಾರ್ಡ್ (Bodyguard).‌

ಹೌದು, ಮೋದಿ ಅವರ ಬಾಡಿಗಾರ್ಡ್ ಗಳ ವಿಚಾರ ದೇಶದ್ಯಂತ ಆಗಾಗ ಸದ್ದು ಮಾಡುತ್ತಿರುತ್ತದೆ. ಅವರ ಸ್ಟೈಲ್, ಹಾವಭಾವ, ಅವರ ಗತ್ತುಗಳ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿರುತ್ತದೆ. ಆದರೀಗ ಹೊಸ ಮಹಿಳಾ ಅಂಗರಕ್ಷಕಿ ಪ್ರಧಾನಿ ಮೋದಿ ಅವರ ವಿದೇಶಿ ಪ್ರವಾಸದ ವೇಳೆ ಲಕ್ಷಾಂತರ ಜನರ ಗಮನ ಸೆಳೆದಿದ್ದಾರೆ.

ಅಂದಹಾಗೆ ಮೋದಿಯವರು ಯುಕೆ ಭೇಟಿ ನೀಡಿದ ಸಂದರ್ಭ ಅವರ ಫೋಟೋವೊಂದು ವೈರಲ್‌ ಆಗುತ್ತಿದೆ. ಆ ಫೋಟೋದಲ್ಲಿ ಮೋದಿ ಅವರ ಹಿಂದುಗಡೆ ಅಂಗರಕ್ಷಕಿ ಹಿಂಬಾಲಿಸುತ್ತಿರುವುದು ಕಾಣಿಸಿಕೊಂಡಿದೆ. ವೈರಲ್ ಚಿತ್ರಗಳಲ್ಲಿ ಪ್ರಧಾನಿ ಮೋದಿ ಅವರ ಹಿಂದೆ ಇರುವ ಮಹಿಳೆಯ ಹೆಸರು ಇನ್ಸ್‌ಪೆಕ್ಟರ್ ಅದಾಸೋ ಕಪೇಸಾ (Adaso Kapesa). ಇವರು ಪ್ರಧಾನಿ ನರೇಂದ್ರ ಮೋದಿಯವರನ್ನು ರಕ್ಷಿಸುವ ಜವಾಬ್ದಾರಿಯುತ ಗಣ್ಯ ವಿಶೇಷ ರಕ್ಷಣಾ ಗುಂಪಿಗೆ (SPG) ಸೇರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಣಿಪುರ ಮೂಲದ ಇವರು ಎಸ್‌ಎಸ್‌ಬಿಯ 55 ನೇ ಬೆಟಾಲಿಯನ್ ಸದಸ್ಯೆಯಾಗಿದ್ದು, ಪುರುಷ ಪ್ರಾಬಲ್ಯದ ಕ್ಷೇತ್ರದಲ್ಲಿಯೂ ಅಡೆತಡೆಗಳನ್ನು ಭೇದಿಸುತ್ತಿದ್ದಾರೆ. ಈ ಮೂಲಕ ದೇಶಾದ್ಯಂತ ಮಹಿಳೆಯರಿಗೆ ಸ್ಫೂರ್ತಿ ನೀಡುತ್ತಿದ್ದಾರೆ. ಅದಾಸೋ ಕಪೇಸಾ ಮೋದಿ ಅವರ ಬಾಡಿ ಗಾರ್ಡ್‌ ಆಗಿ ಕಾಣಿಸಿಕೊಂಡ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಮತ್ತು ಹೆಮ್ಮೆಯ ಸಂದೇಶಗಳು ಹರಿದು ಬಂದಿದೆ.

Ramya: ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ ಗಳಿಂದ ನಿಂದನೆ ಪ್ರಕರಣ – ಮತ್ತೆ ಇಬ್ಬರು ಆರೋಪಿಗಳ ಬಂಧನ

You may also like