Home » ಖಾಸಗಿ ಬಸ್‌ನಲ್ಲಿ ಅನ್ಯಧರ್ಮದ ವಿದ್ಯಾರ್ಥಿಗಳ ಅಸಭ್ಯ ವರ್ತನೆ ಪ್ರಶ್ನಿಸಿದ ನಾಲ್ವರ ಬಂಧನ

ಖಾಸಗಿ ಬಸ್‌ನಲ್ಲಿ ಅನ್ಯಧರ್ಮದ ವಿದ್ಯಾರ್ಥಿಗಳ ಅಸಭ್ಯ ವರ್ತನೆ ಪ್ರಶ್ನಿಸಿದ ನಾಲ್ವರ ಬಂಧನ

by Praveen Chennavara
0 comments

ಮಂಗಳೂರು : ಮಂಗಳೂರಿನ ಸರ್ವೀಸ್ ಬಸ್ ನಿಲ್ದಾಣದಲ್ಲಿ ಶುಕ್ರವಾರ ಖಾಸಗಿ ಬಸ್‌ನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಗೆ ಬುದ್ದಿಮಾತು ಹೇಳಿದ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರನ್ನು ಪ್ರಕಾಶ್, ರಾಘವೇಂದ್ರ, ರಂಜಿತ್, ಪವನ್ ಎಂದು ಗುರುತಿಸಲಾಗಿದೆ.

ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿ ಬಸ್‌ನಲ್ಲಿ ಕುಳಿತುಕೊಂಡಿದ್ದ ಸಂದರ್ಭದಲ್ಲಿ 5-6 ಮಂದಿ ಐಡಿ ಪ್ರೊಫ್ ಕೇಳಿ ಅವರ ಮನೆಯವರ ಬಗ್ಗೆ ವಿಚಾರಿಸಿದ್ದರು.
ಈ ಪ್ರಕರಣದಲ್ಲಿ ಯುವತಿಯ ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ವರ್ತಿಸಿದ್ದರಿಂದ ಪಾಂಡೇಶ್ವರ ಠಾಣೆಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಹಿಂದೂ ಹುಡುಗಿ ಮುಸ್ಲಿಂ ಹುಡುಗನೊಟ್ಟಿಗೆ ಸಿಕ್ಕಿಬಿದ್ದಿದ್ದಾಳೆ ಎಂಬ ವೀಡಿಯೋವನ್ನು ಸಾರ್ವಜನಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ಎರಡು ಕೋಮುಗಳ ನಡುವಿನ ಸೌಹಾರ್ದಕ್ಕೆ ಭಾದಕವನ್ನುಂಟು ಮಾಡಿದ್ದಾರೆ. ಯುವಕ ಮತ್ತು ಯುವತಿ ನಗರದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು ಎಂಬುದು ತಿಳಿದುಬಂದಿದ್ದು ಅವರ ಕುಟುಂಬದವರನ್ನು ಸಂಪರ್ಕಿಸಲಾಗಿದೆ. ಅವರ ಹೇಳಿಕೆ ಪಡೆಯಲಾಗುವುದು. ಯುವಕ- ಯುವತಿಯರನ್ನು ಕೂಡ ಸಂಪರ್ಕಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

You may also like

Leave a Comment