Mangaluru : ಖಾಸಗಿ ಬಸ್‌ಗಳಲ್ಲಿ ಕಡ್ಡಾಯವಾಗಿ ಬಾಗಿಲು ಇರುವುದನ್ನು ಖಾತರಿಪಡಿಸಿಕೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಕೆ ಮಲ್ಲಾಡ್ ಅವರಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚಿಸಿದ್ದಾರೆ. ಮುಡಿಪುವಿನಲ್ಲಿ ವಾಹನ ಚಾಲನಾ ಪರೀಕ್ಷಾ ಕೇಂದ್ರವನ್ನು ವೀಕ್ಷಿಸಿದ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಾಗಿಲುಗಳಿಲ್ಲದೇ ಇರುವ ಬಸ್‌ಗಳಿಗೆ ಎಫ್‌ಸಿ (ಫಿಟ್‌ನೆಸ್ ಸರ್ಟಿಫಿಕೆಟ್) ನೀಡಬೇಡಿ ಎಂದು ಹೇಳಿದರು.
“ಸರ್ಕಾರವು ಇ ಬಸ್‌ಗಳಿಗೆ ಬೇಡಿಕೆ ಸಲ್ಲಿಸಿದ್ದು, ಕೇಂದ್ರ ಸರ್ಕಾರವು ರಾಜ್ಯಗಳಿಗೆ ಕೊಡಲಿರುವ ಬಸ್‌ಗಳ ಖರೀದಿಗಾಗಿ ಟೆಂಡರ್ ಕರೆಯಬೇಕಾಗಿದೆ. ಇದಕ್ಕೆ ಕನಿಷ್ಟ 6 ತಿಂಗಳ ಕಾಲಾವಧಿ ಬೇಕಾದೀತು. ಬಸ್‌ಗಳನ್ನು ಮಂಗಳೂರಿಗೂ ಹಂಚಲಾಗುವುದು’ ಎಂದು ಅವರು ತಿಳಿಸಿದರು.
ಇದನ್ನೂ ಓದಿ:Bar: ಹೊಸ ಬಾರ್ ಓಪನ್ ಮಾಡುವ ಆಲೋಚನೆ ಇದ್ಯಾ? ಎಷ್ಟು ಖರ್ಚಾಗುತ್ತೆ? ಲೈಸೆನ್ಸ್ ಪಡೆಯಲು ಏನೆಲ್ಲ ಬೇಕು?
ಮುಂದುವರಿದು ಮಾತನಾಡಿದ ಅವರು, ‘ಮಂಗಳೂರಿನ ಮುಡಿಪುವಿನಲ್ಲಿನ ತರಬೇತಿ ಕೇಂದ್ರದಲ್ಲಿ ಪ್ರಯೋಗಿಕ ತರಬೇತಿಗೂ ಸೌಲಭ್ಯ ಒದಗಿಸಬೇಕು ಎಂಬ ಬೇಡಿಕೆ ಬಂದಿದೆ. ಇದನ್ನು ಪರಿಗಣಿಸಲಾಗಿದ್ದು ಅಗತ್ಯ ಇರುವವರಿಗೆ ತರಬೇತಿ ನೀಡಲು ಮತ್ತು ಉಳಿದುಕೊಳ್ಳಲು ಬೇಕಾದ ವ್ಯವಸ್ಥೆ ಮಾಡಲಾಗುವುದು. ತರಬೇತಿಗೆ ಟ್ರಕ್ ಅಥವಾ ಬಸ್ ಬೇಕಾಗಿದೆ. ಬಸ್ ಕೆಎಸ್‌ಆರ್‌ಟಿಸಿಯಿಂದ ಪಡೆದುಕೊಳ್ಳಬಹುದು. ಟ್ರಕ್ ಖರೀದಿಗೆ ಆರ್ಥಿಕ ಇಲಾಖೆಯ ಅನುಮತಿ ಬೇಕು’ ಎಂದು ಅವರು ತಿಳಿಸಿದರು.
