YouTube: ಖ್ಯಾತ ಯೂಟ್ಯೂಬರ್ (YouTube) ರಣವೀರ್ ಅಲಹಾಬಾದಿಯಾ ಈ ಹಿಂದೆ ರಿಯಾಲಿಟಿ ಶೋ ಒಂದರಲ್ಲಿ ಅಶ್ಲೀಲ ಹೇಳಿಕೆ ನೀಡಿ ಭಾರಿ ವಿವಾದಕ್ಕೆ ಕಾರಣವಾಗಿದ್ದು ಇದೀಗ ಮತ್ತೆ ಪಾಕಿಸ್ತಾನದ ಪರ ಪೋಸ್ಟ್ ಮಾಡಿ ಭಾರತೀಯರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
“ಪಾಕಿಸ್ತಾನಿ ಸೋದರ, ಸೋದರಿಯರೇ ಭಾರತದ ದಾಳಿಯಿಂದಾಗಿ ನೋವಾಗಿದ್ದರೆ ಕ್ಷಮೆ ಇರಲಿ” ಎಂದು ಹೇಳಿದ್ದು ಬಳಿಕ ಅದನ್ನು ಡಿಲೀಟ್ ಮಾಡಿದ್ದಾರೆ. ಈ ಪೋಸ್ಟ್ ಡಿಲೀಟ್ ಮಾಡುವ ಮುನ್ನವೇ ಸಾಕಷ್ಟು ವೈರಲ್ ಆಗಿದ್ದು ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಪೋಸ್ಟಲ್ಲಿ ” ‘ಭಾರತೀಯ ಜನರು VS ಪಾಕಿಸ್ತಾನಿ ಜನರು’ ಅಲ್ಲ. ಇದು ‘ಭಾರತ VS ಪಾಕಿಸ್ತಾನಿ ಮಿಲಿಟರಿ & ಐಎಸ್‌ಐ’. ದೀರ್ಘಾವಧಿಯಲ್ಲಿ ಶಾಂತಿ ನೆಲೆಸುತ್ತದೆ ಎಂದು ಆಶಿಸುತ್ತೇನೆ ಎಂದು ಬರೆದಿರುವ ರಣವೀರ್ ಅಲಹಾಬಾದಿಯಾ ಈ ಪೋಸ್ಟ್ ಗೆ ಭಾರತ ಮತ್ತು ಪಾಕಿಸ್ತಾನದ ಧ್ವಜಗಳನ್ನು ಕೂಡ ಸೇರಿಸಿದ್ದಾರೆ.
