Home » Hyderabad: ಪಾಕಿಸ್ತಾನದ ವಿರುದ್ಧ ಪ್ರತಿಭಟನೆ – ಬಿಜೆಪಿ ಕಾರ್ಯಕರ್ತರಿಂದ ‘ಜೈಹೋ ಪಾಕಿಸ್ತಾನ್’ ಘೋಷಣೆ

Hyderabad: ಪಾಕಿಸ್ತಾನದ ವಿರುದ್ಧ ಪ್ರತಿಭಟನೆ – ಬಿಜೆಪಿ ಕಾರ್ಯಕರ್ತರಿಂದ ‘ಜೈಹೋ ಪಾಕಿಸ್ತಾನ್’ ಘೋಷಣೆ

0 comments

Hyderabad: ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಿಂದಾಗಿ ದೇಶಾದ್ಯಂತ ಪಾಕಿಸ್ತಾನದ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಹಲವೆಡೆ ಜನರು ಪಾಕ್‌ ವಿರುದ್ಧ ಘೋಷಣೆ ಕೂಗಿ, ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

ಅಂತಯೇ ಹೈದರಾಬಾದ್ ನಲ್ಲಿ ಪಾಕಿಸ್ತಾನದ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಜೈ ಹೋ ಪಾಕಿಸ್ತಾನ ಎಂದು ಘೋಷಣೆ ಕೂಗಿದ ವಿಚಿತ್ರ ಘಟನೆ ನಡೆದಿದೆ.

ಹೌದು, ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತನೊಬ್ಬ ಧಿಕ್ಕಾರ ಕೂಗುವ ಭರದಲ್ಲಿ ʼಜೈಹೋ ಪಾಕಿಸ್ತಾನ್‌ʼ ಎಂದು ಕಿರುಚಿದ್ದಾನೆ. ಕೂಡಲೇ ಪಕ್ಕದಲ್ಲಿದ್ದವರು ಆತನನ್ನು ಎಚ್ಚರಿಸಿದ್ದು, ಹಲ್ಲು ಬಿಡುತ್ತಾ ತನ್ನ ತಪ್ಪಿನ ಅರಿವಾಗಿ ತಲೆ ತಗ್ಗಿಸಿದ್ದಾನೆ.

You may also like