Home » Viral Video : ನೂಕುತ್ತಾ- ತಳ್ಳುತ್ತಾ ಮಹಿಳಾ ಪೊಲೀಸ್ ನನ್ನೇ ತಬ್ಬಿಕೊಂಡ ಪ್ರಭಟನಕಾರರು!! ವಿಡಿಯೋ ವೈರಲ್

Viral Video : ನೂಕುತ್ತಾ- ತಳ್ಳುತ್ತಾ ಮಹಿಳಾ ಪೊಲೀಸ್ ನನ್ನೇ ತಬ್ಬಿಕೊಂಡ ಪ್ರಭಟನಕಾರರು!! ವಿಡಿಯೋ ವೈರಲ್

0 comments

Viral Video : ಪ್ರತಿಭಟನೆ ವೇಳೆ ಪೊಲೀಸರು ರಕ್ಷಣೆಗೆ ನಿಲ್ಲುವುದು ಸಾಮಾನ್ಯ. ಈ ಸಂದರ್ಭದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೂ ಕೂಡ ಒಮ್ಮೊಮ್ಮೆ ಡ್ಯೂಟಿಯಲ್ಲಿ ಇರುತ್ತಾರೆ. ಅಂತಿಯೇ ಇಲ್ಲೊಂದಡೆ ಪ್ರತಿಭಟನೆ ನಡೆಯುತ್ತಿದ್ದು ಇದರ ನಿಯಂತ್ರಣಕ್ಕಾಗಿ ಮಹಿಳಾ ಪೊಲೀಸ್ ಅಧಿಕಾರಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ನೂಕಾಟ-ತಳ್ಳಾಟ ಮಾಡುತ್ತಾ ಈ ಮಹಿಳಾ ಪೊಲೀಸ್ ಅಧಿಕಾರಿಯನ್ನೇ ತಬ್ಬಿಕೊಂಡಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು, ನಾಗ್ಪುರ ರದಲ್ಲಿ ನಡೆದ ಒಂದು ಪ್ರತಿಭಟನೆಯನ್ನು ನಿಯಂತ್ರಿಸಲು ಮಹಿಳಾ ಪೊಲೀಸ ಅಧಿಕಾರಿಯನ್ನು ನಿಯೋಜಿಸಲಾಯಿತು. ಈ ವೇಳೆ ಪೊಲೀಸರ ತಂಡವು ಪ್ರತಿಭಟನೆಯಲ್ಲಿ ತೊಡಗಿದ್ದವರನ್ನು ಬಂಧಿಸಲು ಮುಂದಾದಾಗ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಒಬ್ಬ ವ್ಯಕ್ತಿ ಹಿಂದಿನಿಂದ ಅನುಚಿತವಾಗಿ ಹಿಡಿದಿದ್ದಾನೆ. ಕೂಡಲೇ ಇದನ್ನು ವಿರೋಧಿಸಿದ ಮಹಿಳಾ ಅಧಿಕಾರಿ ಆತನಿಗೆ ಬಾರಿಸಿ ಪೊಲೀಸ್ ವ್ಯಾನ್ ಕಡೆಗೆ ಎಳೆದೊಯ್ಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ವೈರಲ್ ವಿಡಿಯೋದಲ್ಲಿ ಈ ಘಟನೆ ವೇಳೆ ಒಬ್ಬ ವ್ಯಕ್ತಿ ಪೊಲೀಸ್ ಅಧಿಕಾರಿಗಳನ್ನು ವಿರೋಧಿಸಲು ಪ್ರಯತ್ನಿಸುತ್ತಿದ್ದರೆ, ಇನ್ನೊಬ್ಬ ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಅಲ್ಲದೆ ವಿಡಿಯೊದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯು ತನ್ನನ್ನು ಅನುಚಿತವಾಗಿ ಹಿಡಿದ ವ್ಯಕ್ತಿ ವಿರುದ್ಧ ತಕ್ಷಣ ಕ್ರಮಕ್ಕೆ ಮುಂದಾಗುತ್ತಿರುವುದನ್ನು ಕಾಣಬಹುದು.

You may also like