Bengaluru: ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜನಸ್ತೋಮ ಸೇರಿದಾಗ ನಡೆದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರ ಇದಕ್ಕೆ ಪೊಲೀಸರನ್ನು ಹೊಣೆ ಮಾಡಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಮಿಷನರ್ ಬಿ.ದಯಾನಂದ್ ಅವರನ್ನು ಅಮಾನತುಗೊಳಿಸಿರುವ ಸರ್ಕಾರದ ಆದೇಶದ ವಿರುದ್ಧ ಹೆಡ್ ಕಾನ್ಸ್ ಟೇಬಲ್ ಓರ್ವರು ಪ್ರತಿಭಟನೆ ನಡೆಸಿದ್ದಾರೆ.
ಹೌದು, ಮಡಿವಾಳ ಠಾಣೆಯ ಹೆಡ್ ಕಾನ್ಸ್ ಟೇಭಲ್ ಒಬ್ಬರು ರಾಜಭವನಕ್ಕೆ ತೆರಳಿ ಪ್ರತಿಭಟನೆ ನಡೆಸಿದ್ದಾರೆ. ನರಸಿಂಹರಾಜು ಎಂಬ ಹೆಡ್ ಕಾನ್ಸ್ ಟೇಬಲ್, ಸರ್ಕಾರದ ಆದೇಶ ಖಂಡಿಸಿ ಕೈಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಫೋಟೋ ಹಿಡಿದು, ಕಪ್ಪುಪಟ್ಟಿ ಧರಿಸಿ ರಾಜಭವನದ ಎದುರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕಾಗಮಿಸಿದ ವಿಧಾನಸೌಧ ಪೊಲೀಸರು, ಹೆಡ್ ಕಾನ್ಸ್ ಟೇಬಲ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಇದೇ ವೇಳೆ ಮಾತನಾಡಿದ ಹೆಡ್ ಕಾನ್ಸ್ಟೇಬಲ್ ನರಸಿಂಹರಾಜು ಮಾತನಾಡಿ. ಪೊಲೀಸ್ರು ಒಂದು ರೀತಿ ಬ್ರೋಕರ್ ಗಳಾಗಿದ್ದಾರೆ. ಈ ಕಡೆ ಕಾಂಗ್ರೆಸ್ ನವರು ಒದ್ರು ಒದ್ದಿಸಿಕೊಳ್ಳಬೇಕು. ಬಿಜೆಪಿ ಒದ್ರು ಒದ್ದಿಸಿಕೊಳ್ಳಬೇಕು. ಜೆಡಿಎಸ್ ನವ್ರು ಗುದ್ದಿದ್ರು ಗುದ್ದಿಸಿಕೊಳ್ಳಬೇಕು. ಸಂಜೆ ಆದ್ರೆ ನಮ್ಮವರು ರಾಜಕಾರಣಿಗಳ ಮನೆ ಮುಂದೆ ಹೋಗಿ ಕೈ ಕಟ್ಟಿ ನಿಲ್ಲುತ್ತಿದ್ದಾರೆ. ದಯಾನಂದ್ ಸಾಹೇಬ್ರೆ ಒಳ್ಳೆ ಕೆಲಸ ಮಾಡಿದ್ದಾರೆ. ಅವರನ್ನ ಅಮಾನತ್ತು ಮಾಡಿದ್ದ ಸರಿಯಿಲ್ಲ ಅವರ ಅಮಾನತ್ತನ್ನು ರದ್ದು ಮಾಡಬೇಕು ಎಂದು ಹೆಚ್ ಸಿ ನರಸಿಂಹರಾಜು ಆಗ್ರಹಿಸಿದ್ರು.
