Home » Ratan Tata: ರತನ್ ಟಾಟಾ ಪಾರ್ಥೀವ ಶರೀರಕ್ಕೆ ಮುಂಬೈನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ನಲ್ಲಿ ಸಾರ್ವಜನಿಕ ಗೌರವ ಸಲ್ಲಿಕೆ

Ratan Tata: ರತನ್ ಟಾಟಾ ಪಾರ್ಥೀವ ಶರೀರಕ್ಕೆ ಮುಂಬೈನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ನಲ್ಲಿ ಸಾರ್ವಜನಿಕ ಗೌರವ ಸಲ್ಲಿಕೆ

3 comments

Ratan Tata: ಹಿರಿಯ ಕೈಗಾರಿಕೋದ್ಯಮಿ ಮತ್ತು ಟಾಟಾ ಗ್ರೂಪ್‌ನ ಗೌರವ ಅಧ್ಯಕ್ಷ ರತನ್ ಟಾಟಾ ಬುಧವಾರ ರಾತ್ರಿ ಮುಂಬೈ ಆಸ್ಪತ್ರೆಯಲ್ಲಿ ನಿಧನರಾಗಿದ್ದು ಇದೇ ದೇಶ ಅವರ ಸಾವಿಗೆ ಮರುಗುತ್ತಿದೆ. ಅವರಿಗೆ ತುಂಬು 86 ವರ್ಷ ವಯಸ್ಸಾಗಿದ್ದರು ಒಂದು ರೀತಿಯ ತಳಮಳ ಭಾರತದಲ್ಲಿ ಮೂಡಿದೆ.

ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಟಾಟಾ ಇನ್ನೂ ಕೇವಲ ನೆನಪು ಮಾತ್ರ. ಅವರು ನಿನ್ನೆ ರಾತ್ರಿ ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ರತನ್ ಟಾಟಾ ಅವರ ನಿಧನವನ್ನು ಖಚಿತಪಡಿಸಿದ್ದರು. ಅವರು ಕಳೆದ ಕೆಲವು ದಿನಗಳಿಂದ ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು.

ರತನ್ ಟಾಟಾ ನಿಧನದಿಂದ ನನಗೆ ತುಂಬಾ ನೋವಾಗಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿಯವರು, ‘ಅವರು ಒಬ್ಬ ದೂರದೃಷ್ಟಿಯ ಉದ್ಯಮಿ, ನಾಯಕ, ಸಹಾನುಭೂತಿಯ ಆತ್ಮ ಮತ್ತು ಅಸಾಧಾರಣ ಮನುಷ್ಯ’ ಎಂದು ಬಣ್ಣಿಸಿದ್ದಾರೆ.

ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಏಕನಾಥ್ ಶಿಂಧೆ, ಟಾಟಾ ಅವರ ಪಾರ್ಥೀವ ಶರೀರವನ್ನು ಗುರುವಾರ ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ದಕ್ಷಿಣ ಮುಂಬೈನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ (ಎನ್‌ಸಿಪಿಎ) ಯಲ್ಲಿ ಜನರ ಗೌರವ ಸಲ್ಲಿಸಲು ಇಡಲಾಗುವುದು ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.

ರತನ್ ಟಾಟಾ ಅವರ ಅನುಪಸ್ಥಿತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರ ಹೇಳಿದ್ದಾರೆ. “ಭಾರತದ ಆರ್ಥಿಕತೆಯು ಐತಿಹಾಸಿಕ ಪ್ರಗತಿಯ ತುದಿಯಲ್ಲಿ ನಿಂತಿದೆ. ಮತ್ತು ರತನ್ ಅವರ ಜೀವನ ಮತ್ತು ಕೆಲಸವು ಆಯಾ ಮಟ್ಟದಲ್ಲಿದೆ ಎಂದು ಆನಂದ್ ಮಹಿಂದ್ರ ಅವರು ರತನ್ ಟಾಟಾರನ್ನು ಹೊಗಳಿದ್ದಾರೆ. ಅಷ್ಟೇ ಅಲ್ಲದೆ ದೇಶ ವಿದೇಶಗಳಿಂದ ಸಂತಾಪಗಳ ಮಹಾಪೂರ ಹರಿದು ಬರುತ್ತಿದೆ.

You may also like

Leave a Comment