Home » PUC Exam: ನಾಳೆಯಿಂದ ಪಿಯು ಪರೀಕ್ಷೆ 

PUC Exam: ನಾಳೆಯಿಂದ ಪಿಯು ಪರೀಕ್ಷೆ 

0 comments
PUC Exam

PUC Exam: ದ್ವಿತೀಯ ಪಿಯುಸಿ-2025ರ ವಾರ್ಷಿಕ ಪರೀಕ್ಷೆ-1 ಮಾರ್ಚ್ 1ರಿಂದ 20ರವರೆಗೆ ನಡೆಯಲಿದೆ. ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ವಿದ್ಯಾರ್ಥಿಗಳು ಭಯವಿಲ್ಲದೆ ಪರೀಕ್ಷೆಗೆ ಹಾಜರಾಗುವಂತೆ ಮನವಿ ಮಾಡಿದೆ.

 

ಪರೀಕ್ಷೆಯು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯಲಿದೆ. ಈ ಬಾರಿ 7.13 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ರಾಜ್ಯಾದ್ಯಂತ 1,171 ಪರೀಕ್ಷಾ ಕೇಂದ್ರಗಳಿರಲಿವೆ. ಪರೀಕ್ಷೆ ನಂತರ ಒಟ್ಟು 76 ಮೌಲ್ಯಮಾಪನ ಕೇಂದ್ರಗಳಲ್ಲಿ 31,000 ಮೌಲ್ಯಮಾಪಕರು ಮೌಲ್ಯಮಾಪನ ಮಾಡಲಿದ್ದಾರೆ.

 

ವಿದ್ಯಾರ್ಥಿಗಳ ಗಮನಕ್ಕೆ: ಪರೀಕ್ಷಾ ಸಮಯದ ಮೊದಲೇ ಪರೀಕ್ಷಾ ಕೇಂದ್ರ ತಲುಪಿ ಒತ್ತಡ ಕಡಿಮೆ ಮಾಡಿ.

ಪ್ರವೇಶ ಪತ್ರ ಕೊಂಡೊಯ್ಯಲು ಮರೆಯಬೇಡಿ

ಹೆಚ್ಚುವರಿ ಪೆನ್‌ಗಳನ್ನು ತೆಗೆದುಕೊಂಡು ಹೋಗಿ

ವಾಟರ್‌ ಬಾಟಲ್‌ ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ

ಸಮಯ ನಿರ್ವಹಣೆಯ ಕುರಿತು ಗಮನ ಹರಿಸಿ.

You may also like