Home » ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ತಂದೆ ಹೃದಯಸ್ತಂಭನದಿಂದ ನಿಧನ|ಗಂಡನನ್ನು ಕಳೆದುಕೊಂಡ ರೀತಿಯಲ್ಲೇ ತಂದೆಯನ್ನೂ ಕಳೆದುಕೊಂಡ ಅಶ್ವಿನಿ !!

ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ತಂದೆ ಹೃದಯಸ್ತಂಭನದಿಂದ ನಿಧನ|ಗಂಡನನ್ನು ಕಳೆದುಕೊಂಡ ರೀತಿಯಲ್ಲೇ ತಂದೆಯನ್ನೂ ಕಳೆದುಕೊಂಡ ಅಶ್ವಿನಿ !!

0 comments

ಬೆಂಗಳೂರು:ಪುನೀತ್ ರಾಜಕುಮಾರ್ ಮರಣದ ನೋವು ಇನ್ನೂ ತಡೆಯಲಾರದ ಪರಿಸ್ಥಿತಿಯ ನಡುವೆ ಪತ್ನಿ ಅಶ್ವಿನಿ ಅವರಿಗೆ ಮತ್ತೊಂದು ಆಘಾತ ಎದುರಾಗಿದ್ದು,ಅವರ ತಂದೆ ರೇವನಾಥ್ ಹೃದಯಸ್ತಂಭನದಿಂದ ನಿಧನರಾಗಿದ್ದಾರೆ.

ಅಶ್ವಿನಿ ಅವರ ತಂದೆ ರೇವನಾಥ್ ಅವರು ಹೃದಯಾಘಾತದಿಂದ ಬೆಂಗಳೂರಿನಲ್ಲಿ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ರೇವನಾಥ್ ಅವರು ಅಳಿಯ ಪುನೀತ್ ಅಗಲಿಕೆ ನಂತರ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

78 ವರ್ಷದ ರೇವನಾಥ್ ಅವರು ಅಪ್ಪು ಅಗಲಿಕೆ ಬಳಿಕ ಅಶ್ವಿನಿ ತಂದೆ, ತಾಯಿ, ಮಗಳ ಜೊತೆ ಸದಾಶಿವನಗರದ ನಿವಾಸದಲ್ಲಿದಲ್ಲೇ ವಾಸವಿದ್ದರು. ಅಪ್ಪು ಅಗಲಿಕೆ ಬಳಿಕ ಮಗಳಿಗೆ ಒಂಟಿತನ ಕಾಡಬಾರದೆಂದು ಜೊತೆಯಲ್ಲೇ ಇದ್ದರು. ಆರೋಗ್ಯವಾಗಿಯೇ ಇದ್ದ ರೇವನಾಥ್ ಅವರಿಗೆ ದಿಢೀರ್ ಅಂತಾ ಅನಾರೋಗ್ಯ ಕಾಣಿಸಿಕೊಂಡಿದ್ದ ಹಿನ್ನೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾದೆ ಅಶ್ವಿನಿಯವರ ತಂದೆ ಇಹಲೋಕ ತ್ಯಜಿಸಿದ್ದಾರೆ.

ಚಿಕ್ಕಮಗಳೂರು ಮೂಲದ ಅಶ್ವಿನಿ ತಂದೆ, ಹಲವು ವರ್ಷಗಳಿಂದ ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಿದ್ದರು. ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು.

You may also like

Leave a Comment