Home » Punjab: ವೃದ್ಧೆ ತಾಯಿಗೆ ಅಮಾನುಷವಾಗಿ ಥಳಿಸಿದ ಲಾಯರ್‌ ಮಗ! ಆಕೆ ಕಿರುಚುತ್ತಿದ್ದರೂ ಕರುಣೆ ಬರಲಿಲ್ಲ- ವೀಡಿಯೋ ವೈರಲ್‌!!!

Punjab: ವೃದ್ಧೆ ತಾಯಿಗೆ ಅಮಾನುಷವಾಗಿ ಥಳಿಸಿದ ಲಾಯರ್‌ ಮಗ! ಆಕೆ ಕಿರುಚುತ್ತಿದ್ದರೂ ಕರುಣೆ ಬರಲಿಲ್ಲ- ವೀಡಿಯೋ ವೈರಲ್‌!!!

by Mallika
1 comment
Punjab

Punjab: ಇದೊಂದು ಹೃದಯ ಒಡೆದು ಹೋಗುವ ಘಟನೆಯೆಂದೇ ಹೇಳಬಹುದು. ಏಕೆಂದರೆ ತಾನೇ ಹೆತ್ತು ಸಾಕಿ ಸಮಾಜದಲ್ಲಿ ಉತ್ತಮ ಸ್ಥಾನ ಗೌರವ ಸಿಗುವಂತೆ ಬೆಳೆಸಿದ ಮಗನೇ ತನ್ನ ತಾಯಿಯನ್ನು ನಿರ್ದಾಕ್ಷಿಣ್ಯವಾಗಿ ಥಳಿಸುವ ವೀಡಿಯೋವೊಂದು ಹೊರ ಬಂದಿದೆ. ಇದರಲ್ಲಿ ಮಗ ತನ್ನ ತಾಯಿಯನ್ನು ಕ್ರೂರವಾಗಿ ಥಳಿಸುತ್ತಿರುವುದು ಕಂಡು ಬಂದಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿದ್ದು, ನಿಜಕ್ಕೂ ಇದನ್ನು ನೋಡಿದವರು ಗಾಬರಿಗೊಂಡಿದ್ದಾರೆ. ಆ ಇಳಿ ವಯಸ್ಸಿನ ತಾಯಿಗೆ ಮಗ ಮಾತ್ರವಲ್ಲ, ಆತನ ಪತ್ನಿ, ಅವರ ಮಗ ಕೂಡಾ ಕೈ ಎತ್ತಿ ಹಲವು ಬಾರಿ ಹಲ್ಲೆ ನಡೆಸಿರುವ ವೀಡಿಯೋ ವೈರಲ್‌ ಆಗಿದೆ.

ಈಗ ಎನ್‌ಜಿಒ ನೆರವಿನಿಂದ ಆ ತಾಯಿಯನ್ನು ಆಕೆಯ ಮಗಳು ರಕ್ಷಿಸಿದ್ದಾಳೆ. ಈ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ಮಗ ವಕೀಲನಾಗಿದ್ದು, ಇಡೀ ಕುಟುಂಬ ಜೊತೆಗೆ ವೃದ್ಧ ತಾಯಿ ಕೂಡಾ ವಾಸಿಸುತ್ತಿದ್ದಾರೆ. ಒಂದು ದಿನ ವಕೀಲನ ತಂಗಿ ಮನೆಗೆ ಬಂದಾಗ ತಾಯಿ ಮಗಳ ಬಳಿ ತನ್ನ ದುಃಖ ಹೇಳಿಕೊಂಡಿದ್ದು, ಮಗ, ಸೊಸೆ ಸೇರಿ ಮನೆಯವರೆಲ್ಲ ನನಗೆ ಥಳಿಸುತ್ತಾರೆ ಎಂದು ಹೇಳಿದ್ದಾರೆ. ಅನಂತರ ಮಗಳು ಅಮ್ಮನ ಕೋಣೆಯಲ್ಲಿ ಅಳವಡಿಸಿದ ಸಿಸಿಟಿವಿಯನ್ನು ಪರಿಶೀಲಿಸಿದಾಗ ತಾಯಿಗೆ ಹೊಡೆಯುವ ದೃಶ್ಯ ಬಯಲಾಗಿದೆ.

ಮಗಳು ಕೊನೆಗೆ ತನ್ನ ತಾಯಿಯನ್ನು ಉಳಿಸಲೇಬೇಕೆಂದು ದೃಢ ನಿರ್ಧಾರ ಮಾಡಿದ್ದು, ಅಣ್ಣ ವಕೀಲನಾಗಿರುವುದರಿಂದ ಆಕೆ ಮಾಡಿದ ಯಾವುದೇ ಪ್ರಯತ್ನ ಕೂಡಾ ಸಫಲತೆ ಕಾಣಲಿಲ್ಲ. ಕೊನೆಗೆ ಆಕೆ ಮೊರೆ ಹೋದದ್ದೇ, ಎನ್‌ಜಿಒ ಒಂದಕ್ಕೆ.

ಎನ್‌ಜಿಒ ಜೊತೆಗೂಡಿ ಸಹೋದರಿ ತನ್ನ ತಾಯಿಯನ್ನು ರಕ್ಷಿಸಿದ್ದಾಳೆ. ವಯಸ್ಸಾದ ತಾಯಿಯನ್ನು ಇಡೀ ಕುಟುಂಬವು ಎಷ್ಟು ಅಮಾನುಷವಾಗಿ ಥಳಿಸುತ್ತಿದೆ ಎಂಬುದು ಸಿಸಿಟಿವಿ ದೃಶ್ಯಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಅನಂತರ ಸ್ಥಳೀಯ ಮಟ್ಟದಲ್ಲಿ ಪೊಲೀಸರು ಮತ್ತು ಆಡಳಿತವನ್ನು ಸಂಪರ್ಕಿಸಲಾಯಿತು. ಇದರ ನಂತರ, ಅವರು ವೃದ್ಧೆಯನ್ನು ತನ್ನ ಸ್ವಂತ ಮಗನ ಕುಟುಂಬದ ಹಿಡಿತದಿಂದ ಬಚಾವ್‌ ಮಾಡಿದರು.

 

ಇದನ್ನು ಓದಿ: Mass Suicide: ಒಂದೇ ಕುಟುಂಬ 7 ಮಂದಿ ಸಾಮೂಹಿಕ ಆತ್ಮಹತ್ಯೆ! ಕಾರಣವೇನು ಗೊತ್ತೇ?

You may also like

Leave a Comment