Home » ಪುತ್ತಿಲ ಶ್ರೀರಾಮ ಗೆಳೆಯರ ಬಳಗದಿಂದ ಶಿಕ್ಷಕರ ದಿನಾಚರಣೆ

ಪುತ್ತಿಲ ಶ್ರೀರಾಮ ಗೆಳೆಯರ ಬಳಗದಿಂದ ಶಿಕ್ಷಕರ ದಿನಾಚರಣೆ

by Praveen Chennavara
0 comments

ನರಿಮೊಗರು : ಶ್ರೀರಾಮ ಗೆಳೆಯರ ಬಳಗ ಪುತ್ತಿಲ ಇದರ ವತಿಯಿಂದ ಶಿಕ್ಷಕರ ದಿನಾಚರಣೆಯ ಈ ದಿವಸ ಸ್ಥಳೀಯ ಶಿಕ್ಷಕಿ ಯನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಮುಂಡೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶರ್ಮಿಳಾ ರಮೇಶ ನಾಡಾಜೆ ಯವರನ್ನು ಶಾಲು ಹಾಕಿ ಸ್ಮರಣಿಕೆ ಮತ್ತು ಪುಸ್ತಕ
ನೀಡಿ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.

ಸುಮಾರು 20 ವರ್ಷದಿಂದ ಅತ್ಯಂತ ಪ್ರಾಮಾಣಿಕತೆ ಮತ್ತು ಶ್ರದ್ದೆ ಯಿಂದ ಕೆಲಸ ಮಾಡಿ ಜನನುರಾಗಿಯಾಗಿದ್ದರು. ಈ ಭಾಗದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಅಂಗನವಾಡಿ ಯಲ್ಲಿ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸುವಲ್ಲಿ ಶ್ರಮ ವಹಿಸಿ ಸಾರ್ವಜನಿಕವಾಗಿ ಪ್ರಶಂಸೆ ಪಡೆದಿದ್ದರು.

ಸನ್ಮಾನ ಕಾರ್ಯಕ್ರಮ ವನ್ನು ಮುಂಡೂರು ಮತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀ ಬಾಲಚಂದ್ರ ಗೌಡ ಕಡ್ಯ,ಮುಂಡೂರು ಹಾಲು ಉತ್ಪಾದಕರ ಸಂಘದ ನಿರ್ದೇಶಕ ಅನಿಲ್ ಕಣ್ಣರ್ನೂಜಿ. ಮತ್ತು ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ನಾಯ್ಕ್, ಶಾಲು ಹಾಕಿ, ಸ್ಮರಣಿಕೆ ಮತ್ತು ಪುಸ್ತಕ ನೀಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಳಗದ ಗೌರವಧ್ಯಕ್ಷ ಅರುಣ್ ಪುತ್ತಿಲ,ಕಾರ್ಯದರ್ಶಿ ದಿನೇಶ್ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ಶರ್ಮಿಳಾ ಮಾತನಾಡಿ ಸಹಕಾರ ಕೊಟ್ಟ ಎಲ್ಲರನ್ನು ನೆನಪಿಸಿ, ಗುರುತಿಸಿ ಗೌರವಿಸಿದ ಗೆಳೆಯರ ಬಳಗದವರಿಗೆ ಕ್ರತಜ್ಞತೆ ಸಲ್ಲಿಸಿದರು. ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ಸ್ವಾಗತಿಸಿ ಧನಂಜಯ ಧನ್ಯವಾದ ಸಲ್ಲಿಸಿದರು. ಪ್ರಸಾದ್ ಬಿಕೆ ಕಾರ್ಯಕ್ರಮ ನಿರೂಪಿಸಿದರು.

You may also like

Leave a Comment