Home » Puttur: ವಿಹಿಂಪ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆ; ಅರುಣ್‌ ಪುತ್ತಿಲ ಆಗಮಕ್ಕೆ ತೀವ್ರ ವಿರೋಧ, ಉಭಯ ತಂಡಗಳ ನಡುವೆ ಮಾತಿನ ಚಕಮಕಿ

Puttur: ವಿಹಿಂಪ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆ; ಅರುಣ್‌ ಪುತ್ತಿಲ ಆಗಮಕ್ಕೆ ತೀವ್ರ ವಿರೋಧ, ಉಭಯ ತಂಡಗಳ ನಡುವೆ ಮಾತಿನ ಚಕಮಕಿ

0 comments

Puttur: ವಿಶ್ವಹಿಂದೂ ಪರಿಷತ್‌ನ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅರುಣ್‌ ಪುತ್ತಿಲ ಆಗಮಿಸಿದ್ದು, ಇದಕ್ಕೆ ಕೆಲವು ಹಿಂದೂ ಸಂಘಟನೆಯ ಕೆಲ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಂತರ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ಪುತ್ತೂರಿನ ಎಸ್‌ಡಿಸಿಸಿ ಬ್ಯಾಂಕ್‌ ಮುಂಭಾಗದಲ್ಲಿ ವಿಶ್ವ ಹಿಂದೂ ಪರಿಷದ್‌ ಕಾರ್ಯಾಲಯವು ಇದ್ದಿದ್ದು, ಈ ಸ್ಥಳದಲ್ಲಿ ಅ.23 ರಂದು ವಿಶ್ವ ಹಿಂದೂ ಪರಿಷತ್‌ನ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆಯನ್ನು ಕುಕ್ಕೆ ಸುಬ್ರಹ್ಮಣ್ಯದ ನರಸಿಂಹಸ್ವಾಮಿ ಸಂಪುಟ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ಅರುಣ್‌ ಕುಮಾರ್‌ ಪುತ್ತಿಲ ಹಾಗೂ ಮೂವರು ಅವರ ಮೂವರು ಬೆಂಬಲಿಗರ ಜೊತೆ ಸೇರಿ ಈ ಸಮಾರಂಭಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಅವರು ತನ್ನ ಕಾರಿನಿಂದ ಇಳಿಯುತ್ತಿದ್ದಂತೆ ವಿಶ್ವಹಿಂದೂ ಪರಿಷತ್‌, ಬಜರಂಗದಳ ಮತ್ತು ಹಿಂದೂ ಜಾಗರಣೆ ವೇದಿಕೆಯ ಮುಂಚೂಣಿಯಲ್ಲಿರುವ ಕೆಲ ಕಾರ್ಯಕರ್ತರು ಪುತ್ತಿಲರನ್ನು ತಡೆದಿದ್ದಾರೆ.

ಪುತ್ತೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್‌ ತೆಂಕಿಲ ಅವರು ಪುತ್ತಿಲ ಅವರ ನೆರವಿಗೆ ಬಂದು, ಕಾರ್ಯಕರ್ತರ ನಡುವೆ ವಾಗ್ವಾದ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್‌ನ ಹಿರಿಯ ಮುಖಂಡ ಯು ಪೂವಪ್ಪ ಅವರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಣ ಮಾಡಿದರು.

ನಂತರ ಪುತ್ತಿಲ ಅವರನ್ನು ಸಭಾಂಗಣಕ್ಕೆ ಕರೆದುಕೊಂಡು ಹೋಗಲಾಯಿತು. ಪುತ್ತೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಬಿಗಿ ಬಂದೋಬಸ್ತು ಮಾಡಿದ್ದಾರೆ. ಅರುಣ್‌ ಕುಮಾರ್‌ ಪುತ್ತಿಲ ಅವರು ಕೆಲ ಹೊತ್ತು ಸಭೆಯಲ್ಲಿ ಉಪಸ್ಥಿತರಿದ್ದು, ನಂತರ ಅಲ್ಲಿಂದ ನಿರ್ಗಮಿಸಿದ್ದಾರೆ.

 

You may also like

Leave a Comment