Home » Puttur: ಬಿಜೆಪಿ ಮುಖಂಡನ ಪುತ್ರನ ಲವ್-ಸೆಕ್ಸ್-ದೋಖಾ ಕೇಸ್: ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ ಸಂತ್ರಸ್ತೆ

Puttur: ಬಿಜೆಪಿ ಮುಖಂಡನ ಪುತ್ರನ ಲವ್-ಸೆಕ್ಸ್-ದೋಖಾ ಕೇಸ್: ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ ಸಂತ್ರಸ್ತೆ

0 comments

Puttur: ಪುತ್ತೂರು ಬಿಜೆಪಿ ಮುಖಂಡನ ಪುತ್ರನ ಲವ್-ಸೆಕ್ಸ್-ದೋಖಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಹಾಗೂ ಮಗುವಿಗೆ ಇನ್ನೂ ನ್ಯಾಯಸಿಕ್ಕಿಲ್ಲ.

ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಗರ್ಭವತಿಯನ್ನಾಗಿಸಿ ಮಗುವಿಗೆ ಯುವತಿ ಜನ್ಮ ನೀಡಿದರೂ ಆರೋಪಿ ಇನ್ನೂ ತನ್ನ ಮಗು ಎಂಬುದನ್ನು ಒಪ್ಪಿಕೊಳ್ಳುತ್ತಿಲ್ಲ. ಯುವತಿಯನ್ನು ಮದುವೆಯಾಗಲೂ ಒಪ್ಪುತ್ತಿಲ್ಲ.ಪುತ್ತೂರು ಬಿಜೆಪಿ ಮುಖಂಡ ಜಗನ್ನಾಥ ರಾವ್ ಅವರ ಪುತ್ರ ಕೃಷ್ಣ ಜೆ ರಾವ್, ಯುವತಿಯನ್ನು ನಂಬಿಸಿ ಮಗು ಹುಟ್ಟಲು ಕಾರಣವಾಗಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿ ಆರೋಪಿ ಕೃಷ್ಣ ರಾವ್ ನನ್ನು ಬಂಧಿಸಲಾಗಿದೆ. ಕೃಷ್ಣ ರಾವ್ ಮಗು ತನ್ನದಲ್ಲ ಎಂದು ಹೇಳಿದ್ದರಿಂದ ಡಿಎನ್ ಎ ಪರೀಕ್ಷೆ ನಡೆಸಲಾಗಿತ್ತು. ಡಿಎನ್ ಎ ಪರೀಕ್ಷೆಯಲ್ಲಿ ಮಗು ಕೃಷ್ಣ ರಾವ್ ನದ್ದು ಎಂಬುದು ದೃಢಪಟ್ಟಿದೆ.

ಸಂತ್ರಸ್ತೆಯನ್ನು ತಾನು ಮದುವೆಯಾಗಲ್ಲ ಎಂದು ಹಠ ಹಿಡಿದು ಕುಳಿತಿದ್ದಾನೆ. ಮಗುವಿಗೆ ಆರು ತಿಂಗಳಾಗಿದ್ದರೂ ಸಂತ್ರಸ್ತೆಯನ್ನು ಕಾನೂನು ಪ್ರಕಾರ ವಿವಾಹವಾಗಲು ಆರೋಪಿ ಒಪ್ಪುತ್ತಿಲ್ಲ.ಆರ್.ಎಸ್.ಎಸ್.ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಹಲವು ಬಿಜೆಪಿ ನಾಯಕರು, ಗ್ರಾಮಸ್ಥರು ಸೇರಿದಂತೆ ಹಲವು ಮುಖಂಡರ ಸಮ್ಮುಖದಲ್ಲಿ ಸಂಧಾನ ನಡೆಸಲಾಗಿತ್ತು. ಆದರೂ ಕೃಷ್ಣ ರಾವ್ ಸಂತ್ರಸ್ತೆಯನ್ನು ವಿವಾಹವಾಗಲು, ಮಗುವನ್ನು ಒಪ್ಪಲು ಸಿದ್ಧನಿಲ್ಲ. ಬೇರೆ ದಾರಿಕಾಣದೆ ಸಂತ್ರಸ್ತೆ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದು, ಕೋರ್ಟ್ ಮೂಲಕವಾಗಿ ತಾನು ನ್ಯಾಯ ಪಡೆದುಕೊಳ್ಳುವುದಾಗಿ ತಿಳಿಸಿದ್ದಾಳೆ.

You may also like