Home » ಪುತ್ತೂರು | ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ವಿದ್ಯುತ್ ಅವಘಡ

ಪುತ್ತೂರು | ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ವಿದ್ಯುತ್ ಅವಘಡ

0 comments

ಪುತ್ತೂರು: ಬೊಳುವಾರಿನ ಗಣೇಶ್ ಇಲೆಕ್ಟ್ ವೈಂಡರ್ಸ್ ಇಲೆಕ್ಟ್ರಾನಿಕ್ಸ್ ಮಳಿಗೆಯೊಂದರಲ್ಲಿ ವಿದ್ಯುತ್ ಅವಘಡದಿಂದಾಗಿ ಸ್ವಲ್ಪ ಮಟ್ಟದ ಬೆಂಕಿ ಕಾಣಿಸಿಕೊಂಡ ಘಟನೆ ಇಂದು ನಡೆದಿದೆ.

ಇಲೆಕ್ಟಿಕಲ್ ಸಾಮಾಗ್ರಿಗಳ ರಿಪೇರಿ ಮತ್ತು ಬಿಡಿಭಾಗಗಳ ಮಳಿಗೆಯಾದ ಗಣೇಶ್ ಇಲೆಕ್ಟೋ ವೈಂಡರ್ಸ್ ನಲ್ಲಿ ಮಧ್ಯಾಹ್ನದ ವೇಳೆ ವಿದ್ಯುತ್ ಶಾಕ್ ಸರ್ಕ್ಯೂಟ್ ನಿಂದಾಗಿ ಸ್ವಲ್ಪ ಮಟ್ಟದ ಬೆಂಕಿ ಕಾಣಿಸಿಕೊಂಡಿದ್ದು, ಶಾಪ್ ತುಂಬೆಲ್ಲಾ ಹೊಗೆ ಆವರಿಸಿತ್ತು.

ತಕ್ಷಣ ಎಚ್ಚೆತ್ತ ಮಳಿಗೆಯವರು ಮತ್ತು ಸಾರ್ವಜನಿಕರು ಬೆಂಕಿಯನ್ನು ಆರಿಸಿದ್ದು, ನಡೆಯಬಹುದಾಗಿದ್ದ ಬಹುದೊಡ್ಡ ಅಪಘಾತವೊಂದು ತಪ್ಪಿದಂತಾಗಿದೆ. ಕೆಲ ವಸ್ತುಗಳಿಗೆ ಸ್ವಲ್ಪ ಪ್ರಮಾಣ ಹಾನಿಯುಂಟಾಗಿದೆ ಎಂದು ತಿಳಿದು ಬಂದಿದೆ.

You may also like

Leave a Comment