Home » Puttur: ಕುಂಬ್ರ ಅರ್ಚನಾ ಕಾಂಪ್ಲೆಕ್ಸ್ ಮಾಲಕ ಬಾಬು ಪೂಜಾರಿ ಬಡಕ್ಕೋಡಿ ನಿಧನ

Puttur: ಕುಂಬ್ರ ಅರ್ಚನಾ ಕಾಂಪ್ಲೆಕ್ಸ್ ಮಾಲಕ ಬಾಬು ಪೂಜಾರಿ ಬಡಕ್ಕೋಡಿ ನಿಧನ

by ಕಾವ್ಯ ವಾಣಿ
0 comments

Puttur : ಕುಂಬ್ರದಲ್ಲಿರುವ ಅರ್ಚನಾ ಕಾಂಪ್ಲೆಕ್ಸ್ ಮಾಲಕ, ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷ ಬಾಬು ಪೂಜಾರಿ ಬಡಕ್ಕೋಡಿ (67ವ)ರವರು ಹೃದಯಾಘಾತದಿಂದ ಮಾ.16ರಂದು ಬೆಳಿಗ್ಗೆ ನಿಧನರಾದರು.

ಇವರು ಕುಂಬ್ರ ವರ್ತಕರ ಸಂಘದ ಸದಸ್ಯರಾಗಿ, ಕುಂಬ್ರ ವಿಶ್ವ ಯುವಕ ಮಂಡಲದ ಸದಸ್ಯರಾಗಿ, ಒಳಮೊಗ್ರು ಗ್ರಾಮದ ಹಿರಿಯ ಬಿಜೆಪಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದರು. ಕುಂಬ್ರದಲ್ಲಿ ಹಲವು ವರ್ಷಗಳಿಂದ ಕಬ್ಬಿನ ಜ್ಯೂಸ್ ವ್ಯಾಪಾರಸ್ಥರಾಗಿ ‘ ಜ್ಯೂಸ್ ಬಾಬಣ್ಣ’ ಎಂದೇ ಖ್ಯಾತಿ ಆಗಿದ್ದರು.

You may also like