Home » Puttur: ಪುತ್ತೂರಿನ ತೆಂಕಿಲದಲ್ಲಿ ಮರಾಟಿ ಸಂಭ್ರಮ!

Puttur: ಪುತ್ತೂರಿನ ತೆಂಕಿಲದಲ್ಲಿ ಮರಾಟಿ ಸಂಭ್ರಮ!

0 comments

Puttur: ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ (ರಿ.) ಮಂಗಳೂರುಇದರ ಆಶ್ರಯದಲ್ಲಿ ಮರಾಟಿ ಸಂಭ್ರಮ 2025 ಆಯೋಜಿಸಲಾಗಿದೆ.

ಸ್ವಾಮಿ ಕಲಾಮಂದಿರ ತೆಂಕಿಲ ಬೈಪಾಸ್, ಪುತ್ತೂರು ಇಲ್ಲಿ ಡಿಸಂಬರ್ 28 ರಂದು ಆದಿತ್ಯವಾರಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಜೊತೆಗೆ ಸಾಧಕರಿಗೆ ಸನ್ಮಾನ,ಮರಾಟಿ ವಧು – ವರರ ಸಮಾನ್ವೇಷಣೆ, ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಲಾ ವೈಭವವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಶ್ರೀ ಅಶೋಕ್ ನಾಯ್ಕ ಕೆದಿಲ, ಜಿಲ್ಲಾ ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ (ರಿ.) ಮಂಗಳೂರು ಇವರು ವಹಿಸಲಿದ್ದಾರೆ.ಕಾರ್ಯಕ್ರಮ ಉದ್ಘಾಟನೆಯನ್ನು ಮಾನ್ಯ ಶ್ರೀ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ ಇವರು ಮಾಡಲಿದ್ದಾರೆ.ಇನ್ನು ಮುಖ್ಯ ಅತಿಥಿಗಳಾಗಿ, ಮಾನ್ಯ ಶ್ರೀ ಕಿಶೋರ್ ಕುಮಾರ್ ಬೊಟ್ಯಾಡಿ, ವಿಧಾನ ಪರಿಷತ್ ಸದಸ್ಯರು, ಉಡುಪಿ-ದಕ್ಷಿಣ ಕನ್ನಡ ಜಿಲ್ಲೆ, ಡಾ| ಬಿ.ಜಿ ನಾಯ್ಕ, ನಿವೃತ್ತ ನಿರ್ದೇಶಕರು, ಕೃಷಿ ವಿಭಾಗ-ಭಾರತ ಸರಕಾರ ಅಧ್ಯಕ್ಷರು, ಶ್ರೀ ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ (ರಿ.) ಪೆರ್ಲ, ಕಾಸರಗೋಡು, ಶ್ರೀ ರಾಮಚಂದ್ರ ಕೆಂಬಾರೆ, ಕಾರ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟ (ರಿ.) ಮಂಗಳೂರು, ಶ್ರೀ ರಾಮ ನಾಯ್ಕ, ಜನರಲ್ ಮ್ಯಾನೇಜರ್, ಕೆನರಾ ಬ್ಯಾಂಕ್ ಬೆಂಗಳೂರು, ಶ್ರೀ ಉಮೇಶ್ ನಾಯ್ಕ, ಉದ್ಯಮಿಗಳು-ಚೆನ್ನೈ, ಶ್ರೀ ಪ್ರವೀಣ್ ಕುಮಾರ್ ಮುಗುಳಿ, ನ್ಯಾಯವಾದಿಗಳು ಉಚ್ಚ ನ್ಯಾಯಾಲಯ ಹಾಗೂ ಪ್ರಧಾನ ಕಾರ್ಯದರ್ಶಿಗಳು, ಕರ್ನಾಟಕ ಮರಾಟಿ ಸಂಘ (ರಿ.) ಬೆಂಗಳೂರು, ರಾಜ್ಯ ಸಂಚಾಲಕರು, ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟ (ರಿ.) ಮಂಗಳೂರು, ಶ್ರೀ ರಾಮಚಂದ್ರ ಎಂ., ಕಾರ್ಯನಿರ್ವಾಹಕ ಇಂಜಿನಿಯರ್, ವಿಭಾಗ ಕಛೇರಿ, ಸೆಸ್ಕ್ ಮಡಿಕೇರಿ, ಶ್ರೀ ಅರುಣ್ ಕುಮಾರ್ ಪುತ್ತಿಲ, ಸಂಚಾಲಕರು, ಪುತ್ತಿಲ ಪರಿವಾರ ಸೇವಾ ಟ್ರಸ್ಟ್(ರಿ.) ಪುತ್ತೂರು, ಶ್ರೀಮತಿ ಶಾರದಾ ದಾಮೋದರ ನಾಯ್ಕ ಮಂಗಳೂರು, ಅಧ್ಯಕ್ಷರು, ಮಹಿಳಾ ವೇದಿಕೆ ಮರಾಟಿ, ಶ್ರೀಮತಿ ಕಮಲ ನಾರಾಯಣ ನಾಯ್ಕ, ಶ್ರೀದುರ್ಗಾ ಎಜುಕೇಶನ್‌ ಟ್ರಸ್ಟ್ ಸುರತ್ಕಲ್ ಇವರುಗಳು ಭಾಗವಹಿಸಲಿದ್ದಾರೆ.

You may also like