Home » Puttur: ನಗರಸಭೆಯ ಆವರಣ ಗೋಡೆ ಕುಸಿತ: ಮೂರು ಆಟೋಗೆ ಹಾನಿ

Puttur: ನಗರಸಭೆಯ ಆವರಣ ಗೋಡೆ ಕುಸಿತ: ಮೂರು ಆಟೋಗೆ ಹಾನಿ

0 comments

Puttur: ಪುತ್ತೂರು ನಗರಸಭೆಯ ಕಾರ್ಯಾಲಯದ ಮುಂಭಾಗದಲ್ಲಿನ ಗ್ರಾಮ ಚಾವಡಿಯ ಹಿಂಬದಿಯ ಆವರಣಗೋಡೆ ಭಾನುವಾರ ಕುಸಿದು ಬಿದ್ದ ಘಟನೆ ನಡೆದಿದೆ. ಈ ಘಟನೆಯಲ್ಲಿ ಮೂರು ಆರೋ ರಿಕ್ಷಾಗಳಿಗೆ ಹಾನಿಯಾಗಿದೆ. ಘಟನೆ ಸಂದರ್ಭ ಚಾಲಕರು ಸ್ಥಳದಲ್ಲಿ ಇರಲಿಲ್ಲ.

ನಗರಸಭೆಯಿಂದ ಇಂಗು ಗುಂಡಿಯನ್ನು ಆವರಣ ಗೋಡೆಯ ಬಳಿ ನಿರ್ಮಿಸಲಾಗಿತ್ತು. ಎಡಬಿಡದೆ ಸುರಿದ ಮಳೆಯಿಂದಾಗಿ ನೀರು ಇಂಗುಗುಂಡಿಯಲ್ಲಿ ತುಂಬಿ ಆವರಣ ಗೋಡೆ ಕುಸಿದಿದೆ ಎನ್ನಲಾಗಿದೆ. ಆವರಣ ಗೋಡೆ ಕುಸಿದ ಸಂದರ್ಭದಲ್ಲಿ ನಗರಸಭೆಯ ಪಕ್ಕದಲ್ಲಿದ್ದ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಕಂಬ ವಾಲಿದೆ.

ನಗರಸಭೆಯ ಉಪಾದ್ಯಕ್ಷ, ಸದಸ್ಯರು ಪರಿಶೀಲನೆ ನಡೆಸಿದ್ದು, ರಸ್ತೆಗೆ ಬಿದ್ದ ಮಣ್ಣು, ಕಲ್ಲುಗಳನ್ನು ನಗರಸಭೆಯ ಪೌರ ಕಾರ್ಮಿಕರು ತೆರವು ಮಾಡಿದರು.

 

You may also like