Home » ಪುತ್ತೂರು:ಕಬ್ಬು ಕೊಡಿಸುವುದಾಗಿ ಹೇಳಿ ಎಂಡೋಪೀಡಿತ ಯುವಕನ ಮೇಲೆ ಅತ್ಯಾಚಾರ!!|ಆರೋಪಿ ಮಹಮ್ಮದ್ ಹನೀಫ್ ಅರೆಸ್ಟ್

ಪುತ್ತೂರು:ಕಬ್ಬು ಕೊಡಿಸುವುದಾಗಿ ಹೇಳಿ ಎಂಡೋಪೀಡಿತ ಯುವಕನ ಮೇಲೆ ಅತ್ಯಾಚಾರ!!|ಆರೋಪಿ ಮಹಮ್ಮದ್ ಹನೀಫ್ ಅರೆಸ್ಟ್

0 comments

ಪುತ್ತೂರು: 20 ವರ್ಷದ ಎಂಡೋಪೀಡಿತ ಯುವಕನಿಗೆ ಕಬಕ ಗ್ರಾಮದ ಮುರ ರೈಲ್ವೇ ಕ್ರಾಸ್ ಬಳಿ ಕಬ್ಬು ಕೊಡಿಸುವುದಾಗಿ ಹೇಳಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ.

ಶುಕ್ರವಾರ ಸಂಜೆ ಯುವಕ ಸಂಜೆ 6.00 ಗಂಟೆಗೆ ವಾಕಿಂಗ್ ಗೆಂದು ಮನೆಯಿಂದ ಹೋಗಿದ್ದು, ಮನೆಗೆ ಮರಳಿದ ಸಂದರ್ಭದಲ್ಲಿ ಆತನ ವಸ್ತ್ರ ಮಣ್ಣಿನಿಂದ ಕೂಡಿದನ್ನು ಕಂಡು ಮನೆ ಮಂದಿ ವಿಚಾರಿಸಿದಾಗ ಅತ್ಯಾಚಾರದ ಯತ್ನ ಬೆಳಕಿಗೆ ಬಂದಿದೆ.

ಆರೋಪಿ ಮಹಮ್ಮದ್ ಹನೀಫ್ ಕಬ್ಬು ನೀಡುವ ನೆಪದಲ್ಲಿ ಮುರ ರೈಲ್ವೇ ಕ್ರಾಸ್ ಹತ್ತಿರ ಕರೆದುಕೊಂಡು ಹೋಗಿ ಈ ಕೃತ್ಯ ಎಸಗಿದ್ದಾನೆ.ಯುವಕ‌ ನಿರಾಕರಿಸಿದ ಸಂದರ್ಭದಲ್ಲಿ ಹಲ್ಲೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾನೆ. ಈ ವಿಚಾರವನ್ನು ಮನೆಯವರಿಗೆ ತಿಳಿಸಿದರೆ ಕೊಲೆ ಮಾಡುವ ಬೆದರಿಕೆ ಒಡ್ಡಿದ್ದಾನೆ.

ಈ ಬಗ್ಗೆ ಯುವಕನ ತಂದೆ ನೀಡಿದ ದೂರಿನಂತೆ ಪುತ್ತೂರು ನಗರ‌ ಠಾಣೆಯಲ್ಲಿ ದೂರು ದಾಖಲಾಗಿದೆ.ಘಟನೆ ಸಂಬಂಧ ಆರೋಪಿ ಮಹಮ್ಮದ್ ಹನೀಫ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

You may also like

Leave a Comment