Home » ಪುತ್ತೂರು ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಹಿರಿಯ ಪತ್ರಕರ್ತ ಬಿ.ಟಿ.ರಂಜನ್ ಪಂಚಭೂತಗಳಲ್ಲಿ ಲೀನ

ಪುತ್ತೂರು ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಹಿರಿಯ ಪತ್ರಕರ್ತ ಬಿ.ಟಿ.ರಂಜನ್ ಪಂಚಭೂತಗಳಲ್ಲಿ ಲೀನ

by Praveen Chennavara
0 comments

ಪುತ್ತೂರು : ಇಂದು ನಿಧನ ಹೊಂದಿದ ಪುತ್ತೂರು ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಹಿರಿಯ ಪತ್ರಕರ್ತ ಬಿ.ಟಿ.ರಂಜನ್ ಅವರ ಅಂತ್ಯಕ್ರಿಯೆ ಉಪ್ಪಿನಂಗಡಿ ಮುಕ್ತಿಧಾಮದಲ್ಲಿ ನಡೆಯಿತು.

ಉಪ್ಪಿನಂಗಡಿ ರಥಬೀದಿ ನಿವಾಸಿ ಬಿ.ಟಿ.ರಂಜನ್ ಮುಂಗಾರು, ಹೊಸದಿಗಂತ, ಉದಯವಾಣಿ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದು ಪ್ರಸ್ತುತ ಹೊಸದಿಗಂತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ರಂಜನ್ ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಫೆ.5ರಂದು ನಿಧನಹೊಂದಿದರು.

ಅವರು ಪತ್ನಿ ಗೀತಾ ಶೆಣೈ ಮತ್ತು ಪುತ್ರಿ ಸೌಮ್ಯ ಶೆಣೈಯವರನ್ನು ಅಗಲಿದ್ದಾರೆ.

You may also like

Leave a Comment