Home » Puttur: ಪುತ್ತೂರು ವಿಧಾನಸಭಾ ಕ್ಷೇತ್ರ: 10 ಕಾಲು ಸಂಕ ಮಂಜೂರು: ಶಾಸಕ ಅಶೋಕ್ ರೈ

Puttur: ಪುತ್ತೂರು ವಿಧಾನಸಭಾ ಕ್ಷೇತ್ರ: 10 ಕಾಲು ಸಂಕ ಮಂಜೂರು: ಶಾಸಕ ಅಶೋಕ್ ರೈ

0 comments
Ashok kumar Rai

Puttur: ಪುತ್ತೂರು ವಿಧಾನಸಭಾ ಕ್ಷೆತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಒಟ್ಟು 1೦ ಕಾಲು ಸಂಕ ಮಂಜೂರಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ಗ್ರಾಮೀಣ ಭಾಗದ ಕೆಲವು ಕಡೆಗಳಲ್ಲಿ ಕಾಲು ಸಂಕ ಇಲ್ಲದೆ ಮಳೆಗಾಲದಲ್ಲಿ ತೀವ್ರ ಸಮಸ್ಯೆಯಾಗುತ್ತಿತ್ತು. ವಿದ್ಯಾರ್ಥಿಗಳು, ಸಾರ್ವಜನಿಕರು ಕಿರುಹೊಳೆಯನ್ನು ದಾಟಿ ಹೋಗುವ ಸಂದರ್ಭದಲ್ಲಿ ಅಪಾಯವನ್ನು ಎದುರಿಸಬೇಕಾದ ಸಂದರ್ಭಗಳಿದ್ದವು.

ಅನೇಕ ಕಾಲು ಸಂಕದ ಬೇಡಿಕೆ ಅರ್ಜಿಗಳು ಬಂದಿದ್ದು ಈ ಪೈಕಿ ತುರ್ತಾಗಿ ಆಗಬೇಕಾದ ಕಾಲು ಸಂಕಗಳಿಗೆ ಸರಕಾರದಿಂದ ಅನುದಾನ ಬಿಡುಗಡೆಯಾಗಿದೆ.

ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಕೋಟೆ ಕಾಲು ಸಂಕ ನಿರ್ಮಾಣಕ್ಕೆ ರೂ. 20 ಲಕ್ಷ, ಕುರಿಯಗ್ರಾಮದ ಮತ್ತು ಕೆದಂಬಾಡಿ ಗ್ರಾಮ ಸಂಪರ್ಕ ಕಾಲು ಸಂಕ ರೂ. 15 ಲಕ್ಷ, ಮಾಡೂರು ಗ್ರಾಮದ ಮಿನೋಜಿಕಲ್ಲು ಸಂಪರ್ಕ ರಸ್ತೆ ಬಳಿ ಕಾಲು ಸಂಕ ರೂ.20 ಲಕ್ಷ, ನಿಡ್ನಳ್ಳಿ ಗ್ರಾಮದ ಚಿಕ್ಕೋಡಿಯಿಂದ ಕೂಟೇಲಿಗೆ ಸಂಪರ್ಕ ರಸ್ತೆಗೆ ಕಾಲು ಸಂಕ ರೂ.10 ಲಕ್ಷ, ಕುರಿಯ ಗ್ರಾಮದ ಇಡಬೆಟ್ಟು ಬಳಿಯ ಮಜಲು ಎಂಬಲ್ಲಿ ಕಾಲು ಸಂಕ ರೂ.10 ಲಕ್ಷ, ನರಿಮೊಗ್ರು ಗ್ರಾಮದ ನೆರಿಗೇರಿ-ಬಾರಿಕೆಯಲ್ಲಿ ಕಾಲು ಸಂಕ ನಿರ್ಮಾಣ 25 ಲಕ್ಷ, ಕೊರ್ಳತಿಗೆ ಗ್ರಾಮದ ಭಟ್ರಹಿತ್ತು-ಗುಂಡಿಗದ್ದೆ ಕಾಲು ಸಂಕ ರೂ. 75 ಲಕ್ಷ, ಕೆದಂಬಾಡಿ ಗ್ರಾಮದ ಅಡ್ಕತ್ತಿಮಾರು ಕಾಲು ಸಂಕ ರೂ.20 ಲಕ್ಷ, ಬಜತ್ತೂರು ಗ್ರಾಮದ ಟಪ್ಪಾಲು ಕೊಟ್ಟಿಗೆಯಿಂದ ಬಾರಿಕೆ ಎಂಬಲ್ಲಿ ಕಾಲು ಸಂಕ 75 ಲಕ್ಷ, ಪಡುವನ್ನೂರು ಗ್ರಾಮದ ಸಾರಾಕೂಟೇಲು ಎಂಬಲ್ಲಿ ಕಾಲು ಸಂಕ ನಿರ್ಮಾಣಕ್ಕೆ 75 ಲಕ್ಷ ಅನುದಾನ.

ಈ ಬಾರಿ 10 ವಿವಿಧ ಕಾಲು ಸಂಕ ನಿರ್ಮಾಣಕ್ಕೆ ಸರಕಾರದಿಂದ ಅನುದಾನ ಬಿಡುಗಡೆಯಾಗಿದೆ. ಕೆಲವೊಂದು ಗ್ರಾಮಗಳಲ್ಲಿ ಕಾಲು ಸಂಕವಿಲ್ಲದೆ ಸಂಪರ್ಕವನ್ನೇ ಕಡಿದುಕೊಂಡಿತ್ತು. ಎರಡು ಗ್ರಾಮಗಳ ಸಂಪರ್ಕ ಕೊಂಡಿಯಾಗಿಯೂ ಕಾಲು ಸಂಕ ನಿರ್ಮಾಣವಾಗಲಿದೆ. ಕಾಲು ಸಂಕಕ್ಕೆ ಹಲವಾರು ಬೇಡಿಕೆ ಇದ್ದು ಮುಂದಿನ ದಿನಗಳಲ್ಲಿ ಅವುಗಳನ್ನು ಪರಿಗಣಿಸಲಾಗುವುದು.

You may also like