Home » ಪುತ್ತೂರು : ವೀಕೆಂಡ್ ಕರ್ಫ್ಯೂ ಉಲ್ಲಂಘನೆ ನಿರ್ಧಾರದಿಂದ ಹಿಂದೆ ಸರಿದ ಪುತ್ತೂರಿನ ವರ್ತಕ‌ರ ಸಂಘ

ಪುತ್ತೂರು : ವೀಕೆಂಡ್ ಕರ್ಫ್ಯೂ ಉಲ್ಲಂಘನೆ ನಿರ್ಧಾರದಿಂದ ಹಿಂದೆ ಸರಿದ ಪುತ್ತೂರಿನ ವರ್ತಕ‌ರ ಸಂಘ

by Praveen Chennavara
0 comments

ಪುತ್ತೂರು : ಕೊರೊನಾ ಪ್ರಕರಣ ಏರಿಕೆ ಹಿನ್ನಲೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ವಿಕೇಂಡ್ ಕರ್ಪ್ಯೂ ಹೇರಿದ್ದ ಜಿಲ್ಲಾಡಳಿತದ ಕ್ರಮದ ವಿರುದ್ದ ಹೋರಾಟದ ಹಾದಿ ಹಿಡಿದಿದ್ದ ವರ್ತಕರ ಸಂಘ ಇದೀಗ ಅಧಿಕಾರಿಗಳ ಜೊತೆ ಸಭೆಯ ಬಳಿಕ ವೀಕೆಂಡ್ ಕರ್ಫೂ ಉಲ್ಲಂಘನೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಜಿಲ್ಲೆಯಲ್ಲಿ ವಿಕೇಂಡ್ ಕರ್ಪ್ಯೂ ನಿಂದಾಗಿ ವ್ಯಾಪಾರದಲ್ಲಿ ನಷ್ಟವುಂಟಾಗುತ್ತಿದೆ ಎಂದು ಆರೋಪಿಸಿ ಪುತ್ತೂರು ವರ್ತಕರ ಸಂಘ ಕರ್ಫೂ ಉಲ್ಲಂಘಿಸಿ ವ್ಯವಹಾರ ನಡೆಸಲು ನಿರ್ಧರಿಸಿತ್ತು. ಈ ಹಿನ್ನಲೆಯಲ್ಲಿ ಇಂದು ವರ್ತಕರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಪುತ್ತೂರು ತಹಶೀಲ್ದಾರ್ ಜಿಲ್ಲೆಯ ಕೊರೊನಾ ಸ್ಥಿತಿಗತಿಯನ್ನು ತಿಳಿಸಿದ್ದು, ಈಗಾಗಲೇ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ 2.8 ಇದೆ, 2 ಪರ್ಸೆಂಟ್ ಕ್ಕಿಂತ ಕಡಿಮೆಯಾಗದೆ ಕೊರೊನಾ ಮಾರ್ಗಸೂಚಿಯಲ್ಲಿ ಬದಲಾವಣೆ ಕಷ್ಟ ಎಂದು ವರ್ತಕರಿಗೆ ಮನವರಿಕೆ ಮಾಡಿದರು.

ಪುತ್ತೂರು ನಗರಸಭಾ ಆಯುಕ್ತರು ಮತ್ತು ಪುತ್ತೂರು ತಹಶೀಲ್ದಾರ್ ಹಾಗೂ ಅಧಿಕಾರಿಗಳ ಮನವಿಗೆ ಸ್ಪಂದಿಸಿದ ವರ್ತಕರು ತಮ್ಮ ನಿರ್ಧಾರದಿಂದ ಹಿಂದೆ ಸರಿದು ಶನಿವಾರ ಮತ್ತು ಭಾನುವಾರ ಅಂಗಡಿ ಬಂದ್ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ.

You may also like

Leave a Comment