2
Puttur: ಪುತ್ತೂರಿನಲ್ಲಿ (Puttur) ಮಹಿಳೆಯೋರ್ವರು ವಿದ್ಯುತ್ ಶಾಕ್ ನಿಂದ ಮೃತಪಟ್ಟ ಘಟನೆ ನಡೆದಿದೆ.
ದೇವಪ್ಪ ನಾಯ್ಕ ಅವರ ಪತ್ನಿ ಭಾಗೀರಥಿ ಮೃತ ದುರ್ದೈವಿ.
ಮಧ್ಯಾಹ್ನದ ವೇಳೆ ಮನೆಯ ಟೆರೇಸ್ ಮೇಲೆ ಹೋಗಿದ್ದ ಸಂದರ್ಭ ಇವರು ಪಂಪ್ ಗೆ ಅಳವಡಿಸಿದ್ದ ವಯರ್ ಮೇಲೆ ತಪ್ಪಿ ಕಾಲಿಟ್ಟಿದ್ದಾರೆ. ಆ ಸಂದರ್ಭ ವಿದ್ಯುತ್ ಸ್ಪರ್ಶಿಸಿದೆ ಎನ್ನಲಾಗಿದೆ. ಇವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
