Home » Putturu: ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ರಾಜ್ಯ ಪುರಸ್ಕಾರ

Putturu: ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ರಾಜ್ಯ ಪುರಸ್ಕಾರ

by ಕಾವ್ಯ ವಾಣಿ
0 comments

Putturu: ಬೆಂಗಳೂರಿನ ರಾಜಭವನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ನಡೆದ 2023-24 ನೇ ಸಾಲಿನ ಚತುರ್ಥ ಚರಣ ರಾಜ್ಯ ಪುರಸ್ಕಾರ ಪ್ರಶಸ್ತಿ ಸಮಾರಂಭದಲ್ಲಿ ಸಾಂದೀಪನಿ ವಿದ್ಯಾಸಂಸ್ಥೆಯ ಬುಲ್ ಬುಲ್ ವಿದ್ಯಾರ್ಥಿನಿ ಅಮೃತ.ಜೆ.ಎನ್ ( ಶ್ರೀ ಜಗದೀಶ್ ಅಮಿನ್ ಹಾಗೂ ಸರಿತಾ.ಎ ಇವರ ಪುತ್ರಿ ), ಗೈಡ್ ವಿದ್ಯಾರ್ಥಿನಿ ಸೌಂದರ್ಯ (ಶ್ರೀಮತಿ ಶೋಭಾ ಇವರ ಪುತ್ರಿ)

ಇವರು ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಇವರಿಂದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯಮಟ್ಟದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿಯಾದ ರಾಜ್ಯ ಪುರಸ್ಕಾರ ಪ್ರಶಸ್ತಿ ಮತ್ತು ಪ್ರಮಾಣ ಪತ್ರವನ್ನು ಸ್ವೀಕರಿಸಿದರು.

 

ಇವರಿಗೆ ಶಾಲಾ ಸಂಚಾಲಕರಾದ ಶ್ರೀ ಭಾಸ್ಕರ್ ಆಚಾರ್ ಹಿಂದಾರ್ ಹಾಗೂ ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಜಯಮಾಲಾ ವಿ ಎನ್ ರವರು ಅಭಿನಂದನೆ ಸಲಿಸಿದ್ದಾರೆ. ಬುಲ್ ಬುಲ್ ಶಿಕ್ಷಕಿಯಾದ ಶ್ರೀಮತಿ ಅನಿತಾ ಹಾಗೂ ಗೈಡ್ ಶಿಕ್ಷಕಿಯಾದ ಶ್ರೀಮತಿ ರೇಷ್ಮಾ ಇವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.

You may also like