Home » Dhanaraj Achar: ‘ಇದನ್ನೂ ನಿನ್ನ ಹೆಂಡ್ತಿ ನೋಡಲ್ವಾ?’ ಧನರಾಜ್ ಆಚಾರ್ ಗೆ ಗೆ ಬಿಗ್ ಬಾಸ್ ವೀಕ್ಷಕರ ಪ್ರಶ್ನೆ- ಅಷ್ಟಕ್ಕೂ ಧನರಾಜ್ ಮಾಡಿದ್ದೇನು?

Dhanaraj Achar: ‘ಇದನ್ನೂ ನಿನ್ನ ಹೆಂಡ್ತಿ ನೋಡಲ್ವಾ?’ ಧನರಾಜ್ ಆಚಾರ್ ಗೆ ಗೆ ಬಿಗ್ ಬಾಸ್ ವೀಕ್ಷಕರ ಪ್ರಶ್ನೆ- ಅಷ್ಟಕ್ಕೂ ಧನರಾಜ್ ಮಾಡಿದ್ದೇನು?

2 comments

Dhanraj Achar: ಕನ್ನಡದ ಬಿಗ್ ಬಾಸ್ ಸೀಸನ್ 11 ಹಲವು ಹೊಸ ತಿರುವುಗಳೊಂದಿಗೆ ಮುನ್ನಡೆಯುತ್ತಿದೆ. ಈ ಶೋನ ಸ್ಪರ್ಧಿಯಾಗಿರೋ, ದೊಡ್ಮನೆಯಲ್ಲಿ ಜಿಂಕೆ ಮರಿ ಎಂದೇ ಕರೆಸಿಕೊಂಡಿರುವ ಮಂಗಳೂರು ಮೂಲದ, ಕಾಮಿಡಿಯನ್ ಧನರಾಜ್ ಆಚಾರ್(Dhanaraj Achar) ಗೆ ಇದೀಗ ನೆಟ್ಟಿಗರು ಸಿಕ್ಕಾಪಟ್ಟೆ ಕಾಲೆಳೆದಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 11(Bigg Boss Kannada-11) ರಲ್ಲಿ ಮನೆಗೆ ನಗಿಸುವ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಕಾಮೆಡಿಯನ್ ಧನರಾಜ್ ಆಚಾರ್ ಯಾಕೋ ಕಣ್ಣೀರ ಧಾರೆ ಸುರಿಸುವುದರಿಂದಲೇ ಫೇಮಸ್ ಆಗ್ತಿರೋದನ್ನು ವೀಕ್ಷಕರು ಗಮನಿಸುತ್ತಿದ್ದು, ಈ ವಿಚಾರವನ್ನೇ ಇಟ್ಟುಕೊಂಡು ನೆಟ್ಟಿಗರು ಧನರಾಜ್ ಕಾಲೆಳೆದಿದ್ದಾರೆ.

ಅಂದಹಾಗೆ ಈ ವಾರ ಬಿಗ್ ಬಾಸ್​ ಮನೆಗೆ ಫೋನ್​ಬೂತ್ ಬಂದಿದ್ದು, ಇದರ ಜೊತೆಯೂ ಎಲಿಮಿನೇಷ್ ಪ್ರಕ್ರಿಯೆಯೂ ವಿಭಿನ್ನವಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಧನರಾಜ್ ಅವರು ಎಷ್ಟು ಬೇಕು ಅಷ್ಟೇ ಮಾತನಾಡುತ್ತಾರೆ. ಅಲ್ಲದೇ ಅವರು ಮನೆಯಲ್ಲಿ ಅಷ್ಟೊಂದು ಆಕ್ಟಿವ್ ಆಗಿಲ್ಲದ ಕಾರಣ ಡಲ್ ಆಗಿದ್ದಾರೆ. ಇದಕ್ಕೆ ಕಾರಣ ಹಲವು. ಆದ್ರೆ ಅವರು ಗೊಂದಲದಲ್ಲಿದ್ದಾರೆ ಎನ್ನುವ ಕಾರಣ ನೀಡಿ ಶಿಶಿರ್, ಧನರಾಜ್​​ನ ನಾಮಿನೇಟ್ ಮಾಡಿದ್ದಾರೆ. ಇದರಿಂದ ಬೇಸರವಾದ ‘ನಾನು ಅನ್​ಫಿಟ್ ಅನಿಸುತ್ತಿದೆ’ ಎಂದು ಜಿಂಕೆ ಮರಿ ಧನರಾಜ್ ಆಚಾರ್ ಕಣ್ಣೀರು ಹಾಕಿದ್ದಾರೆ.

ಇನ್ನು ಪ್ರತೀ ಬಾರಿ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಏನಾದರೂ ಕಾಲೆಳೆದರೆ ನನ್ನ ಹೆಂಡ್ತಿ ನೋಡ್ತಾಳೆ ಸರ್ ಎಂದು ತಮಾಷೆಯಾಗಿ ಹೇಳುವ ಧನರಾಜ್ ಹೀಗೆ ಅಳುವುದನ್ನು ನೋಡಿ ನೆಟ್ಟಿಗರು ಇದನ್ನೂ ನಿಮ್ಮ ಹೆಂಡ್ತಿ ನೋಡಲ್ವಾ ಎಂದು ಕಾಲೆಳೆದಿದ್ದಾರೆ. ಅಲ್ಲದೆ, ಇಷ್ಟು ವೀಕ್ ಆಗಿದ್ದರೆ ನೀವು ನಿಜಕ್ಕೂ ಬಿಗ್ ಬಾಸ್ ಗೆ ಅನ್ ಫಿಟ್ ಎಂದಿದ್ದಾರೆ.

You may also like

Leave a Comment