Home » Mumbai: ಮಾವ ಮುಖೇಶ್ ಅಂಬಾನಿ ಹಾಗೂ ಸೊಸೆ ರಾಧಿಕಾ ಮರ್ಚೆಂಟ್ ನಡುವೆ ಜಗಳ? – ವಿಡಿಯೋ ವೈರಲ್ !!

Mumbai: ಮಾವ ಮುಖೇಶ್ ಅಂಬಾನಿ ಹಾಗೂ ಸೊಸೆ ರಾಧಿಕಾ ಮರ್ಚೆಂಟ್ ನಡುವೆ ಜಗಳ? – ವಿಡಿಯೋ ವೈರಲ್ !!

0 comments

Mumbai: ಮುಂಬೈನ ಸುಪ್ರಪ್ರಸಿದ್ಧ ಲಾಲ್ ಬಾಗ್ಚಾ ಗಣೇಶ ದರ್ಶನಕ್ಕೆ ಮುಕೇಶ್ ಅಂಬಾನಿ ತಮ್ಮ ಕುಟುಂಬ ಸಮೇತ ತೆರಳಿದ್ದು, ಅಲ್ಲಿ ತಮ್ಮ ಪುತ್ರ ಅನಂತ್ ಮತ್ತು ರಾಧಿಕಾ(Radhika Marchant) ಜೊತೆ ಮುಖೇಶ್ ಅಂಬಾನಿ(Mukhesh Ambani) ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತಾದ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ.

ಹೌದು, ವೈರಲ್ ಆದ ವಿಡಿಯೋದಲ್ಲಿ ಅನಂತ್ ಮತ್ತು ರಾಧಿಕಾ ಆಸ್ಪತ್ರೆಗೆ ಹೋಗುವ ಕುರಿತು ಮಾತನಾಡುತ್ತಿರುವುದು ಕಂಡು ಬಂದಿದೆ. ಇದೇ ವೇಳೆ ಮುಕೇಶ್ ಅಂಬಾನಿ, ತಾನೂ ಸಹ ಆಸ್ಪತ್ರೆಗೆ ಬರುವುದಾಗಿ ಹೇಳುತ್ತಾರೆ. ಆದರೆ ಅನಂತ್ ಮತ್ತು ರಾಧಿಕಾ ಬರುವ ಅವಶ್ಯಕತೆ ಇಲ್ಲ ಎಂದು ಹೇಳುತ್ತಾರೆ. ಅಲ್ಲಿ ಅವರ ಮುಖಭಾವ ಮತ್ತು ಬಾಡಿಲಾಂಗ್ಯೂಜ್​ ನೋಡಿದರೆ ಏನೋ ಜಗಳವಾಡಿದ್ದಾರೆ ಎನಿಸುತ್ತದೆ.

ಈ ವೀಡಿಯೋ ನೋಡಿದ ನೆಟ್ಟಿಗರು ಮಾವ ಮತ್ತು ಸೊಸೆಯ ನಡುವೆ ಜಗಳವಾಗಿದೆಯಂತೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ ವೈರಲ್ ಆಗಿದೆ. ಅಂಬಾನಿಗಳ ನಡುವೆ ವಾದ-ವಿವಾದಗಳನ್ನು ಕಂಡಿರದ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

ಇನ್ನು ಇದಕ್ಕೂ ಮುಂಚಿತವಾಗಿ ಅಂಬಾನಿ ಕುಟುಂಬದೊಂದಿಗೆ ಪೋಟೋ ತೆಗೆಸಿಕೊಂಡು ರಾಧಿಕಾ ಮರ್ಚೆಂಟ್ ಸ್ವಲ್ಪ ಮುಂದೆ ಹೋಗುತ್ತಾರೆ. ಮುಂದೆ ಹೋಗುತ್ತಿರುವ ಸೊಸೆಯನ್ನು ನೋಡಿದ ಮುಖೇಶ್ ಅಂಬಾನಿ ರಾಧಿಕಾಳನ್ನು ಎಳೆದುಕೊಂಡು ಹೋಗುತ್ತಾರೆ… ಮುಕೇಶ್ ಅಂಬಾನಿ ರಾಧಿಕಾ ಅವರ ಸೊಂಟವನ್ನು ಹಿಡಿದು ಎಳೆದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮುಕೇಶ್ ಅಂಬಾನಿ ಸೊಸೆಯನ್ನು ಈ ರೀತಿ ಎಳೆದಿರುವುದನ್ನು ಕಂಡು ಜನ ಅಚ್ಚರಿಗೊಂಡಿದ್ದಾರೆ.

You may also like

Leave a Comment