Actress Karishma Sharma: ರಾಗಿಣಿ ಎಂಎಂಎಸ್ ರಿಟರ್ನ್ ಖ್ಯಾತಿ ನಟಿ ಕರಿಷ್ಮಾ ಶರ್ಮಾ ಅವರು ಚಲಿಸುತ್ತಿದ್ದ ಮುಂಬೈ ಲೋಕಲ್ ರೈಲಿನಿಂದ ಕೆಳಗೆ ಹಾರಿರುವ ಘಟನೆ ನಡೆದಿದ್ದು, ಈ ಘಟನೆಯಲ್ಲಿ ಅವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಟಿ ಕರಿಷ್ಮಾ ಅವರು ಫ್ಲಾಟ್‌ಫಾರ್ಮ್ ಮೇಲೆ ಹಿಮ್ಮುಖವಾಗಿ ಬಿದ್ದಿದ್ದಾರೆ. ಇದರಿಂದ ನಟಿ ತಲೆ ಹಾಗೂ ಹಿಂಭಾಗಕ್ಕೆ ಪೆಟ್ಟಾಗಿದ್ದು, ತಲೆ ಊದಿಕೊಂಡಿದೆ ಎನ್ನಲಾಗಿದೆ.
ನಟಿ ಕರಿಷ್ಮಾ ಶರ್ಮಾ ಅವರು ರಾಗಿಣಿ ಎಂಎಂಎಸ್ ರಿಟರ್ನ್, ಪ್ಯಾರ್ ಕಾ ಪಂಚನಾಮ್-2 ಹಾಗೂ ಉಜ್ದಾ ಚಮನ್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ನಿನ್ನೆ ಶೂಟ್‌ಗಾಗಿ ಚರ್ಚ್‌ಗೇಟ್‌ಗೆ ಹೋಗುವುದಕ್ಕೆ ಹೊರಟಿದ್ದೆ, ಸಾರಿ ಧರಿಸಿದ್ದ ನಾನು ಲೋಕಲ್ ರೈಲಿನಲ್ಲಿ ಹೋಗುವುದಕ್ಕೆ ನಿರ್ಧರಿಸಿದ್ದೆ. ನಾನು ರೈಲು ಏರುತ್ತಿದ್ದಂತೆ ರೈಲು ವೇಗ ಪಡೆದುಕೊಂಡಿತ್ತು. ಈ ವೇಳೆ ನನ್ನ ಸ್ನೇಹಿತರು ಈ ರೈಲನ್ನು ಏರಿಲ್ಲ ಎಂಬುದು ನನ್ನ ಗಮನಕ್ಕೆ ಬರುತ್ತಿದ್ದಂತೆ ನಾನು ಭಯದಿಂದ ನಾನು ರೈಲಿನಿಂದ ಕೆಳಗೆ ಹಾರಿದೆ. ಆದರೆ ದುರಾದೃಷ್ಟವಶಾತ್ ನಾನು ಹಿಮ್ಮುಖವಾಗಿ ಬಿದ್ದಿದ್ದು, ಇದರಿಂದ ನನ್ನ ತಲೆ ನೆಲಕ್ಕೆ ಬಡಿಯಿತು.
ನನ್ನ ಬೆನ್ನಿಗೆ ಗಾಯವಾಗಿದೆ ನನ್ನ ತಲೆ ಊದಿಕೊಂಡಿದೆ. ವೈದ್ಯರು ನನಗೆ ಎಂಆರ್‌ಐ ಮಾಡುವಂತೆ ಸಲಹೆ ನೀಡಿದರು ಹಾಗೂ ತಲೆಗೆ ಗಾಯವಾಗಿರುವುದರಿಂದ ಎರಡು ದಿನ ನನ್ನನ್ನು ಪರಿವೀಕ್ಷಣೆಯಲ್ಲಿ ಇಟ್ಟಿದ್ದಾರೆ. ನಿನ್ನೆಯಿಂದ ನನಗೆ ತುಂಬಾ ನೋವಾಗಿದೆ. ಆದರೂ ನಾನು ಸದೃಢವಾಗಿ ಇದ್ದೇನೆ. ದಯವಿಟ್ಟು ನನ್ನನ್ನು ನಿಮ್ಮ ಪ್ರಾರ್ಥನೆ ವೇಳೆ ನೆನಪಿಸಿಕೊಳ್ಳಿ. ಹಾಗೂ ನಾನು ಬೇಗ ಹುಷಾರಾಗುವುದಕ್ಕಾಗಿ ಪ್ರಾರ್ಥನೆ ಮಾಡಿ ಎಂದು ಮನವಿ ಮಾಡಿದ್ದಾರೆ.
