Home » Rahul Gandhi: ನಾನು ಶೀಘ್ರದಲ್ಲೇ ಮದುವೆಯಾಗಬೇಕಾಗಿದೆ; ರಾಗಾ ಉವಾಚ

Rahul Gandhi: ನಾನು ಶೀಘ್ರದಲ್ಲೇ ಮದುವೆಯಾಗಬೇಕಾಗಿದೆ; ರಾಗಾ ಉವಾಚ

1 comment
Rahul Gandhi

Rahul Gandhi: ರಾಯ್‌ಬರೇಲಿಯಲ್ಲಿ ನಡೆದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಹುಲ್‌ ಗಾಂಧಿ ತಮ್ಮ ಮದುವೆಯ ಬಗ್ಗೆ ಪ್ರಸ್ತಾಪದ ಕುರಿತು ಹೇಳಿದ್ದಾರೆ.

https://twitter.com/i/status/1789926661955141672

ಲೋಕಸಭಾ ಚುನಾವಣೆಯಲ್ಲಿ ರಾಯಬರೇಲಿಯಿಂದ ಕಾಂಗ್ರೆಸ್‌ ಅಭ್ಯರ್ಥಿ ರಾಹುಲ್‌ ಗಾಂಧಿ ಅವರು ಉತ್ತರಪ್ರದೇಶ ಕ್ಷೇತ್ರದಲ್ಲಿ ಇಂದು ರ್ಯಾಲಿಯಲ್ಲಿ ಭಾಗವಹಿಸಿದ್ದು, ಭಾವನಾತ್ಮಕ ಭಾಷಣ ಮಾಡಿದ್ದಾರೆ. ಈ ವೇಳೆ ಕೆಲವೊಂದು ವಿಚಾರದ ಕುರಿತು ಗಂಭೀರವಾಗಿ ಧ್ವನಿಯೆತ್ತಿದರೆ, ಕೊನೆಗೆ ಹಾಸ್ಯರೂಪದ ಸಂಗತಿ ಕೂಡಾ ನಡೆಯಿತು.

ಇದನ್ನೂ ಓದಿ: ATM Rules: ಯಾವುದೇ ಚಾರ್ಜ್ ಇಲ್ಲದೇ ಎಟಿಎಂನಿಂದ ಹಣ ಡ್ರಾ ಹೇಗೆ ಸಾಧ್ಯ ಗೊತ್ತಾ?

ಸಾರ್ವಜನಿಕರು ರಾಹುಲ್‌ ಗಾಂಧಿಯವರ ಭಾಷಣದ ಕೊನೆಗೆ ವಿವಾಹದ ಕುರಿತು ಕೇಳಿದ್ದಾರೆ. ನೀವು ಯಾವಾಗ ಮದುವೆಯಾಗುತ್ತೀರಿ ಎಂದು ಅಲ್ಲಿಗೆ ಬಂದವರು ಕೇಳಿದಾಗ, ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ರಾಹುಲ್‌ ಅವರು ನಾನು ಶೀಘ್ರದಲ್ಲೇ ಮದುವೆಯಾಗಬೇಕಾಗಿದೆ ಎಂದು ಹೇಳಿ ವೇದಿಕೆಯಿಂದ ಹೋಗಿದ್ದಾರೆ.

ಇದನ್ನೂ ಓದಿ: Chattisghar : ‘ಓಯೋ’ ಬಂದ್ ಮಾಡಿಸಿದ BJP ಶಾಸಕ – ರೊಚ್ಚಿಗೆದ್ದು MLA ಕಛೇರಿ ಮುಂದೆಯೇ ಆಟ ಶುರುಮಾಡಿದ ಜೋಡಿ !!

ನನ್ನ ಬಾಳ ಸಂಗಾತಿಯಾಗುವವರಿಗೆ ತಾಯಿ ಸೋನಿಯಾ ಗಾಂಧಿ ಮತ್ತು ಅಜ್ಜಿ ಇಂದಿರಾ ಗಾಂಧಿ ಇಬ್ಬರ ಗುಣ ಇರಬೇಕು. ಅಂತಹ ಸಂಗಾತಿ ಜೊತೆ ಜೀವನ ನಡೆಸಲು ನಾನು ಬಯಸುತ್ತೇನೆ ಎಂದು ರಾಹುಲ್‌ ಗಾಂಧಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

You may also like

Leave a Comment