Home » Rahul Gandhi : ಪ್ರಚಾರದ ವೇಳೆ ಇದ್ದಕ್ಕಿದ್ದಂತೆ ಕೆರೆಗೆ ಹಾರಿದ ರಾಹುಲ್ ಗಾಂಧಿ – ಬೆಚ್ಚಿಬಿದ್ದ ಭದ್ರತಾ ಸಿಬ್ಬಂದಿ

Rahul Gandhi : ಪ್ರಚಾರದ ವೇಳೆ ಇದ್ದಕ್ಕಿದ್ದಂತೆ ಕೆರೆಗೆ ಹಾರಿದ ರಾಹುಲ್ ಗಾಂಧಿ – ಬೆಚ್ಚಿಬಿದ್ದ ಭದ್ರತಾ ಸಿಬ್ಬಂದಿ

0 comments

Rahul Gandhi : ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಬಿಹಾರಕ್ಕೆ ತೆರಳಿರುವ ರಾಹುಲ್ ಗಾಂಧಿಯವರು ಕೆರೆಯಲ್ಲಿ ಮೀನುಗಾರರನ್ನು ಕಂಡು ಇದ್ದಕ್ಕಿದ್ದಂತೆ ಕೆರೆಗೆ ಧುಮುಕಿದ್ದಾರೆ. ಇದನ್ನು ಕಂಡು ಭದ್ರತಾ ಸಿಬ್ಬಂದಿಗಳೆಲ್ಲರೂ ಬೆಚ್ಚಿಬಿದ್ದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೌದು, ಭಾನುವಾರ ಬಿಹಾರದ ಬೇಗುಸರೈ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸುವಾಗ ರಾಹುಲ್ ಗಾಂಧಿ ದೋಣಿಯಿಂದ ಕೆರೆಗೆ ಹಾರಿದ್ದು, ಸಾಂಪ್ರದಾಯಿಕ ಮೀನುಗಾರಿಕೆ ಕುರಿತು ತಿಳಿಯಲು ಬೆಸ್ತರ ಜೊತೆ ತೆರಳುತ್ತಿದ್ದ ರಾಹುಲ್ ಏಕಾಏಕಿ ಕೆರೆಗೆ ಜಂಪ್ ಮಾಡಿದರು ಎನ್ನಲಾಗಿದೆ. ಇನ್ನು ಈ ಸಂದರ್ಭದಲ್ಲಿ ಮಹಾಘಟಬಂಧನ್ ಮೈತ್ರಿಕೂಟದ ಡಿಸಿಎಂ ಅಭ್ಯರ್ಥಿ ಮತ್ತು ವಿಕಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಮುಖ್ಯಸ್ಥ ಮುಕೇಶ್ ಸಹಾನಿ ಮತ್ತು ಕಾಂಗ್ರೆಸ್ ನಾಯಕರಾದ ಕನ್ಹಯ್ಯ ಕುಮಾರ್ ಮುಂತಾದವರು ರಾಹುಲ್ ಗಾಂಧಿ ಜೊತೆಗಿದ್ದರು.

ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಹಿಂದಿನ ಹಲವು ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ಅವರ ಸರಳ ನಡೆ ವೈರಲ್ ಆಗಿತ್ತು.

 

You may also like