BJP: ಕಳೆದ ಲೋಕಸಭಾ ಚುನಾವಣೆಯಲ್ಲಿ (Loksabha Elections) ಕರ್ನಾಟಕದ (Karnataka) ಒಂದು ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಪ್ರಮಾಣದ ಮತ ವಂಚನೆಯಾಗಿದೆ (Votes Scam) ಎಂದು ಕಾಂಗ್ರೆಸ್‌ನ ಆಂತರಿಕ ತನಿಖೆಯಿಂದ ಪತ್ತೆಯಾಗಿರುವುದಾಗಿ ರಾಹುಲ್ ಗಾಂಧಿ (Rahul Gandhi) ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ಹೀಗಾಗಿ ಬೆಂಗಳೂರಿಗೆ ಆಗಮಿಸಿರುವ ರಾಹುಲ್ ಗಾಂಧಿಯವರಿಗೆ ಕರ್ನಾಟಕ ಬಿಜೆಪಿ 13 ಪ್ರಶ್ನೆಗಳನ್ನು ಮುಂದಿಟ್ಟಿದೆ.
ಬಿಜೆಪಿ ಕೇಳಿದ ಪ್ರಶ್ನೆಗಳು :
* ವಾಲ್ಮೀಕಿ ನಿಗಮದ ಹಗರಣ, ಆಂಧ್ರ ಮತ್ತು ತೆಲಂಗಾಣ ಚುನಾವಣೆ ಖರ್ಚಿಗೆ ಬಳಸಿರುವ ಕುರಿತು ಇಡಿ ತನಿಖೆಯಲ್ಲಿ ಬಯಲಾಗಿರುವುದು.
* ಮುಡಾ ಹಗರಣ, ಕಾರ್ಮಿಕ ಕಿಟ್ ಹಗರಣ, ವಸತಿ ಹಗರಣ, ಅಬಕಾರಿ ಲೈಸೆನ್ಸ್ ಹಗರಣ
* ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಾಗಿದ್ದ 40 ಸಾವಿರ ಕೋಟಿ ರೂ. ಹಣವನ್ನು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ವಿನಿಯೋಗಿಸಿರುವುದು
* ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲು ಸಂವಿಧಾನವನ್ನೇ ಬದಲಿಸುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿರುವುದು
* ಹಾಲು, ಮದ್ಯ, ಪೆಟ್ರೋಲ್ ಡೀಸೆಲ್, ವಿದ್ಯುತ್ , ನೀರು, ಬಸ್ ಮತ್ತು ಮೆಟ್ರೋ ಬೆಲೆಯೇರಿಕೆ
* ಅನಕ್ಷರಸ್ಥ ಮಂತ್ರಿಗೆ ಶಿಕ್ಷಣ ಖಾತೆ ನೀಡಿ ಮಕ್ಕಳಿಗೆ ಶೂಸಾಕ್ಸ್ ಕೊರತೆಯುಂಟಾಗಿರುವುದು, ಬಿಸಿಯೂಟಕ್ಕೆ ಆಹಾರಧಾನ್ಯದ ಕೊರತೆ, ಪಾಳುಬಿದ್ದಿರುವ ಸರ್ಕಾರಿ ಶಾಲೆಗಳು
* ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಮಾದಕದ್ರವ್ಯ ಹಾವಳಿ ಹೆಚ್ಚಾಗಿರುವುದು
* ಹಿಂದುಳಿದ ಮಹಿಳೆಯವರ ಮೇಲೆ ದೌರ್ಜನ್ಯ ಹೆಚ್ಚಾಗಿರುವುದು
* ವೋಟ್ ಬ್ಯಾಂಕ್ ಗಾಗಿ ಡಿಜೆ ಹಳ್ಳಿ , ಕೆಜಿ ಹಳ್ಳಿ, ಉದಯಗಿರಿ ಗಲಭೆಗಳ ಆರೋಪಿಗಳ ಮೇಲೆ ಪ್ರಕರಣ ಹಿಂದೆಗೆದುಕೊಂಡಿರುವುದು
ಗೊಬ್ಬರದ ಕೊರೆಯಿಂದ ರೈತರ ಆತ್ಮಹತ್ಯೆ
* ಗುಂಡಿಗಳಲ್ಲಿ ಮುಳುಗಿರುವ ಸಿಲಿಕಾನ್ ಸಿಟಿ
* ಆರ್‌ಸಿಬಿ ಕಾಲ್ತುಳಿತ ಪ್ರಕರಣ
* ಬೆಲೆಯೇರಿಕೆ ಮುಂತಾದ ಸಮಸ್ಯೆಗಳಿಗೆ ಕಾಂಗ್ರೆಸ್ ಕಾರಣವಾಗಿದೆ. ಇವಿಷ್ಟು ಕಾಂಗ್ರೆಸ್ ವಿರುದ್ದ ಬಿಜೆಪಿ ಆರೋಪಗಳಲ್ಲ. ಬದಲಿಗೆ ನಿಮ್ಮ ಸರ್ಕಾಋದ 18 ತಿಂಗಳಲ್ಲಿ ಕರ್ನಾಟಕದ ಜನ ನಿತ್ಯ ಅನುಭವಿಸಿದ ನರಕ ಯಾತನೆಗಳು ಎಂದು ಬಿಜೆಪಿ ಆರೋಪಿಸಿದೆ. ಇವೆಲ್ಲ್ ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಕರ್ನಾಟಕದ ಜನರ ಕ್ಷಮೆ ಕೇಳಬೇಕೆಂದು ಬಿಜೆಪಿ ಒತ್ತಾಯಿಸಿದ್ದು, ರಾಹುಲ್ ಗಾಂಧಿಯವರನ್ನು ಲೂಸರ್ ರಾಹುಲ್ ಗಾಂಧಿ ಎಂದು ಟೀಕಿಸಿದೆ.
