

ಹೊಸದಿಲ್ಲಿ: ಪಥ ಸಂಚಲನದ ನಂತರ ರಾಷ್ಟ್ರಪತಿ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ಚಹಾ ಕೂಟದಲ್ಲಿ ನೀಡಿದ ಈಶಾನ್ಯ ಭಾರತ ಶೈಲಿಯ ಪಟ್ಕಾ ಶಾಲನ್ನು ಹೊದೆಯಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿರಾಕರಿಸಿದ್ದಾರೆ ಎನ್ನಲಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿನಂತಿ ಮಾಡಿದರೂ ನಿರಾಕರಿಸುವ ಮೂಲಕ ಈಶಾನ್ಯ ಭಾರತವನ್ನು ರಾಹುಲ್ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ. ಖರ್ಗೆ ಸೇರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವು ಅತಿಥಿಗಳು ಶಾಲನ್ನು ಹಾಕಿದ್ದರೂ ರಾಹುಲ್ ಮಾತ್ರ ಹಾಕದೇ ಇರುವ ಚಿತ್ರಗಳು ವೈರಲ್ ಆಗಿದೆ.













