Home » Raichur: Raichur: ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಮೂವರು ಯುವಕರ ಶವ ಪತ್ತೆ

Raichur: Raichur: ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಮೂವರು ಯುವಕರ ಶವ ಪತ್ತೆ

by V R
0 comments

Raichur: ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆಂದು ತೆರಳಿದ್ದ ಮೂವರು ಸ್ನೇಹಿತರು ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದು, ಇದೀಗ ಮೂವರ ಮೃತದೇಹ ಪತ್ತೆಯಾಗಿದೆ.

ತುಂಗಭದ್ರಾ ನದಿಯು ಭಾರೀ ಮಳೆಯಿಂದ ತುಂಬಿ ಹರಿಯುತ್ತಿದ್ದು, ನದಿ ತೀರಕ್ಕೆ ಹೋಗದಂತೆ ನಿರ್ಬಂಧ ಮಾಡಿದ್ದರೂ ನಿರ್ಲಕ್ಷ್ಯ ವಿಧಿಸಿದ್ದರೂ ಮೂವರು ಈಜಲು ಹೋಗಿದ್ದಾರೆ. ನಿನ್ನೆ ಮೂವರು ನದಿಯಲ್ಲಿ ಕೊಚ್ಚಿ ಹೋಗಿದ್ದರು. ತೀವ್ರ ಶೋಧಕಾರ್ಯಾಚರಣೆ ನಡೆದ ಬಳಿಕ ಇಂದು ಇವರಿಬ್ಬರ ಮೃತದೇಹ ಪತ್ತೆಯಾಗಿದೆ.

ಹಾಸನ ಮೂಲದ ಅಜಿತ್‌ (20), ಸಚಿನ್‌ (20) ಹಾಗೂ ಪ್ರಮೋದ್‌ (19) ಮೃತ ವ್ಯಕ್ತಿಗಳು. ಎಸ್‌ಡಿಆರ್‌ಎಫ್‌ ತಂಡ ತೀವ್ರ ಶೋಧ ನಡೆಸಿದ ಬಳಿಕ ಮೂವರ ಶವ ಪತ್ತೆಯಾಗಿದೆ. ಈ ಘಟನೆ ಸಂಬಂಧ ಮಂತ್ರಾಲಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನೆ ಮಾಡಲಾಗಿದೆ.

You may also like