Home » Raichuru : ರಾಯಚೂರಿನ ಮಾನ್ವಿಗೆ ತಿಮರೋಡಿ ಗಡಿಪಾರು – ‘ನಮ್ಮ ಊರಿಗೆ ಬೇಡ, ಕಾಡಿಗೆ ಕಳುಹಿಸಿ’ ಎಂದು ದಲಿತ ಸಂಘಟನೆ ಪ್ರತಿಭಟನೆ !!

Raichuru : ರಾಯಚೂರಿನ ಮಾನ್ವಿಗೆ ತಿಮರೋಡಿ ಗಡಿಪಾರು – ‘ನಮ್ಮ ಊರಿಗೆ ಬೇಡ, ಕಾಡಿಗೆ ಕಳುಹಿಸಿ’ ಎಂದು ದಲಿತ ಸಂಘಟನೆ ಪ್ರತಿಭಟನೆ !!

0 comments

Raichuru : ಧರ್ಮಸ್ಥಳದ (Dharmasthala) ಬುರುಡೆ ಪ್ರಕರಣ ಹಾಗೂ ಸೌಜನ್ಯ ಪ್ರಕರಣದಲ್ಲಿ ಹೋರಾಟ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು (Mahesh Shetty Thimarody) ಮಂಗಳೂರಿನಿಂದ ರಾಯಚೂರಿನ ಮಾನ್ವಿಗೆ ಗಡೀಪಾರು ಮಾಡಿ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದಾರೆ. ಇದರ ಬೆನ್ನಲ್ಲೇ ರಾಯಚೂರಿನ ಜನ ತಿಮರೋಡಿ ನಮ್ಮ ಜಿಲ್ಲೆಗೆ ಬರುವುದು ಬೇಡ ಎಂದು ಆಗ್ರಹಿಸಿದ್ದಾರೆ.

ಹೌದು, ಮಹೇಶ್ ಶೆಟ್ಟಿ ತಿಮರೋಡಿಯವರನ್ನು ರಾಯಚೂರಿಗೆ ಗಡಿಪಾರು ಮಾಡಿದ ಬೆನ್ನಲ್ಲೇ ರಾಯಚೂರಿನ ದಲಿತ ಸೇನೆ ಹಾಗೂ ಸಮಾನ ಮನಸ್ಕರ ವೇದಿಕೆ ಪ್ರತಿಭಟನೆ ಆರಂಭಿಸಿದೆ. ಈ ಕುರಿತಾಗಿ ಇನ್ಸ್ಟಾಗ್ರಾಮ್ ಪೋಸ್ಟ್ ಹಾಕಿ “ಮಹೇಶ್ ಶೆಟ್ಟಿ ತಿಮರೋಡಿ ಒಂದು ಜಿಲ್ಲೆಯಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ. ಹಲವು ಪ್ರಕರಣಗಳು ದಾಖಲಾಗಿದೆ. ಇಗೀಗ ಈ ಆರೋಪ ಹೊತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಯನ್ನು ನಮ್ಮ ಜಿಲ್ಲೆಗೆ ಹಾಕಬೇಡಿ. ಯಾವುದಾದರು ಕಾಡಿಗೆ ಗಡೀಪಾರು ಮಾಡಿ” ಎಂದು ಬರೆದುಕೊಂಡಿದೆ.

ಇದನ್ನೂ ಓದಿ:Dasara Holiday : ರಾಜ್ಯದಲ್ಲಿ ದಸರಾ ರಜೆ ವಿಸ್ತರಣೆ? ಶಿಕ್ಷಣ ಸಚಿವರಿಂದ ಬಿಗ್ ಅಪ್ಡೇಟ್

ಅಷ್ಟೇ ಅಲ್ಲದೆ ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಇಂದು (ಸೆ.24) ಬೆಳಗ್ಗೆ 10 ಗಂಟೆ ಪ್ರತಿಭಟನೆ ಆರಂಭಗೊಳ್ಳಲಿದೆ. ತಿಮರೋಡಿ ರಾಯಚೂರು ಜಿಲ್ಲೆಗೆ ಬೇಡ, ಯಾವುದಾದರೂ ಕಾಡಿಗೆ ಗಡೀಪಾರು ಮಾಡಿ ಎಂದು ಪ್ರತಿಭಟನೆ ನಡೆಯಲಿದೆ.

You may also like