Home » ಉಡುಪಿ : ರೈಲು ಡಿಕ್ಕಿ ಹೊಡೆದು ಪ್ರಥಮ ಪಿಯು ವಿದ್ಯಾರ್ಥಿ ಸಾವು

ಉಡುಪಿ : ರೈಲು ಡಿಕ್ಕಿ ಹೊಡೆದು ಪ್ರಥಮ ಪಿಯು ವಿದ್ಯಾರ್ಥಿ ಸಾವು

0 comments

ಉಡುಪಿ : ಕಾಲೇಜು ವಿದ್ಯಾರ್ಥಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಸಾವನಪ್ಪಿರುವ ಘಟನೆ ಶಿರೂರು ಗ್ರಾಮದ ನಿರೋಡಿ ಎಂಬಲ್ಲಿ ಗುರುವಾರ ಮಧ್ಯಾಹ್ನದ ವೇಳೆ ನಡೆದಿದೆ.

ಮೃತ ವಿದ್ಯಾರ್ಥಿ ಶಿರೂರು ಮುದ್ರುಮಕ್ಕಿ ನಿವಾಸಿ ನರಸಿಂಹ ಪೂಜಾರಿ ಎಂಬುವವರ ಪುತ್ರ ಸಂಪತ್ ಪೂಜಾರಿ (17) ಎಂದು ಗುರುತಿಸಲಾಗಿದೆ.

ಈತ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, ಪಿಯುಸಿಯ ವಾಣಿಜ್ಯ ವಿಭಾಗದಲ್ಲಿ ಅಭ್ಯಾಸ ನಡೆಸುತ್ತಿದ್ದ. ಮಧ್ಯಾಹ್ನ ವೇಳೆ ನಿರೋಡಿಯ ತನ್ನ ಅಜ್ಜಿಯ ಮನೆಯಿಂದ ಮುದ್ರುಮಕ್ಕಿಯ ತಂದೆಯ ಮನೆಗೆ ಹೋಗುವ ಸಲುವಾಗಿ ರೈಲು ಹಳಿಯ ಮೇಲೆ ತೆರಳಿದ್ದಾನೆ. ಈ ವೇಳೆ ಹೆಡ್ ಪೋನ್ ಹಾಕಿಕೊಂಡಿದ್ದರಿಂದ ರೈಲು ಹಿಂದಿನಿಂದ ಬಂದಿರುವುದು ತಿಳಿಯದೇ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಮಾಹಿತಿ ಕಲೆಹಾಕಿದ್ದಾರೆ. ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment