Home » ರೈಲು ಡಿಕ್ಕಿಯಾಗಿ ನವಿಲು ಸಾವು

ರೈಲು ಡಿಕ್ಕಿಯಾಗಿ ನವಿಲು ಸಾವು

by Praveen Chennavara
0 comments

ರೈಲು ಡಿಕ್ಕಿಯಾಗಿ ನವಿಲೊಂದು ಸಾವೀಗೀಡಾದ ಬಗ್ಗೆ ಮಂಗಳೂರಿನ ಸೋಮೇಶ್ವರ ಕೋಟೆಕಾರು ಎಂಬಲ್ಲಿ ವರದಿಯಾಗಿದೆ.

ಕೋಟೆಕಾರಿನ ಸ್ಟೆಲ್ಲಾ ಮೇರೀಸ್ ಶಾಲೆಯ ಹಿಂಭಾಗದಲ್ಲಿ ಶುಕ್ರವಾರ ಬೆಳಗ್ಗೆ ಸತ್ತಿರುವ ಸ್ಥಿತಿಯಲ್ಲಿ ಕಂಡು ಬಂದ ರಾಷ್ಟ್ರ ಪಕ್ಷಿ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿರುವ ಬಗ್ಗೆ ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ.

ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ವಾಣಿ ಆಳ್ವ ರವರು ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಅರಣ್ಯ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

You may also like

Leave a Comment