Indian Railway : ರೈಲ್ವೆ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆಯು ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು ಇನ್ನು ಮುಂದೆ ರೈಲು ಹೊರಡುವ ಅರ್ಧ ಗಂಟೆ ಮುಂಚೆ ಟ್ರೈನ್ ಟಿಕೆಟ್ ಬುಕ್ ಮಾಡಬಹುದಾಗಿದೆ.
ಕೆಲವೊಮ್ಮೆ ಅನಿರೀಕ್ಷಿತವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸಬೇಕಾಗುತ್ತದೆ ಇದು ತುರ್ತಾಗಿರುವ ಸಂದರ್ಭದಲ್ಲಿ ಅನೇಕರು ರೈಲು ಪ್ರಯಾಣವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ರೈಲು ಟಿಕೆಟ್ ಬುಕಿಂಗ್ ವ್ಯವಸ್ಥೆ ಕ್ಲೋಸ್ ಆಗಿರುವ ಕಾರಣ ಅನೇಕರಿಗೆ ಇದು ತೊಂದರೆ ಉಂಟಾಗುತ್ತಿದೆ. ಹೀಗಾಗಿ ಇಂತಹ ಸಮಸ್ಯೆಯನ್ನು ತಪ್ಪಿಸಲು ರೈಲ್ವೆ ಇಲಾಖೆಯು ಮಹತ್ವದ ಹೆಜ್ಜೆಯನ್ನು ಇಟ್ಟಿದೆ.
ಹೌದು, ರೈಲು ಹೊರಡುವ 4 ಗಂಟೆಗಳ ಮೊದಲು ಅಂತಿಮ ಚಾರ್ಟ್ ಅನ್ನು ಸಿದ್ಧಪಡಿಸಲಾಗುತ್ತದೆ. ಅಲ್ಲಿಯವರೆಗೆ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಲಭ್ಯವಿರುತ್ತದೆ. ಸಾಮಾನ್ಯವಾಗಿ ಈ ಕೊನೆಯ ಚಾರ್ಟ್ ಅನ್ನು ರೈಲು ನಿಲ್ದಾಣದಿಂದ ಹೊರಡುವ 30 ನಿಮಿಷಗಳ ಮೊದಲು ತಯಾರಿಸಲಾಗುತ್ತದೆ. ಅಂದರೆ, ರೈಲು ಹೊರಡುವ ಅರ್ಧ ಗಂಟೆ ಮೊದಲು ಸೀಟುಗಳು ಖಾಲಿಯಿದ್ದರೆ, ಟಿಕೆಟ್ ಕಾಯ್ದಿರಿಸಬಹುದು. ರೈಲು ಹೊರಡುವ ಮುನ್ನವೇ ಟಿಕೆಟ್‌ಗಳನ್ನು ಬುಕ್ ಮಾಡಲು, ನೀವು IRCTC ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ಇ-ಟಿಕೆಟ್ ಅನ್ನು ಬುಕ್ ಮಾಡಬಹುದು. ಟಿಕೆಟ್‌ಗಾಗಿ ರೈಲು ನಿಲ್ದಾಣಗಳಲ್ಲಿನ ಕೌಂಟರ್‌ಗಳನ್ನು ಸಂಪರ್ಕಿಸಬಹುದು.
ನೀವೇನಾದರೂ ರೈಲು ಹೊರಡುವ 30 ನಿಮಿಷದ ಮುಂಚೆ ಟಿಕೆಟ್ ಬುಕ್ ಮಾಡಬೇಕೆಂದುಕೊಂಡರೆ ಚೆಕ್ ಸಮಯದಲ್ಲಿ ಕರೆಂಟ್ ಅವೈಲಬಲ್ ಎಂಬ ಸ್ಟೇಟಸ್ ಕಾಣಿಸಿಕೊಂಡರೆ, ಸೀಟು ಪ್ರಸ್ತುತ ಬುಕಿಂಗ್‌ಗೆ ಲಭ್ಯವಿದೆ ಎಂದರ್ಥ. ಈ ಟಿಕೆಟ್‌ಗಳನ್ನು ಬುಕ್ ಮಾಡಲು ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ. ಸಾಮಾನ್ಯ ಟಿಕೆಟ್ ದರ ಅನ್ವಯಿಸುತ್ತದೆ.
