Home » Railway Recruitment : ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಸುದ್ದಿ ನೀಡಿದ ರೈಲ್ವೆ ಇಲಾಖೆ : ಗ್ರೂಪ್ ಡಿ ಹುದ್ದೆಗಳಿಗೆ ನೇಮಕಾತಿ : ಮೇ 16 ಅರ್ಜಿ ಸಲ್ಲಿಸಲು ಕೊನೆಯ ದಿನ

Railway Recruitment : ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಸುದ್ದಿ ನೀಡಿದ ರೈಲ್ವೆ ಇಲಾಖೆ : ಗ್ರೂಪ್ ಡಿ ಹುದ್ದೆಗಳಿಗೆ ನೇಮಕಾತಿ : ಮೇ 16 ಅರ್ಜಿ ಸಲ್ಲಿಸಲು ಕೊನೆಯ ದಿನ

4 comments
Railway Recruitment

Railway Recruitment: ಉತ್ತರ ರೈಲ್ವೆ, ರೈಲ್ವೆ ನೇಮಕಾತಿ ಸೆಲ್ (RRC) 38 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಕ್ರೀಡಾ ಕೋಟಾದಡಿ ಈ ನೇಮಕಾತಿ ನಡೆಯುತ್ತಿದ್ದು ಕೇಂದ್ರ ಸರ್ಕಾರಿ ಉದ್ಯೋಗದಲ್ಲಿ ಆಸಕ್ತಿ ಇರುವ ಕ್ರೀಡಾ ಸಾಧಕರು ತಪ್ಪದೆ ಅರ್ಜಿ ಸಲ್ಲಿಸಿ. ಇದರಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಗಳಿಗೆ ಯಾವುದೇ ಹುದ್ದೆಗಳನ್ನು ಮೀಸಲಿಟ್ಟಿಲ್ಲ. ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಅಭ್ಯರ್ಥಿಗಳನ್ನು ಮಾತ್ರ ನೇಮಕಾತಿಯ ಮುಂದಿನ ಪ್ರಕ್ರಿಯೆಗೆ ಆಯ್ಕೆ ಮಾಡಲಾಗುತ್ತದೆ. ಈ ನೇಮಕಾತಿಗಾಗಿ ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಏಪ್ರಿಲ್ 16 ರಿಂದ rrcnr.org ನಲ್ಲಿ ಪ್ರಾರಂಭವಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16 ಮೇ 2024.

ಇದನ್ನೂ ಓದಿ:  Madhavi Latha: ಓವೈಸಿ ವಿರುದ್ಧ ಕಣಕ್ಕಿಳಿದಿರೋ ತೆಲಂಗಾಣದ ಶ್ರೀಮಂತ ಮಹಿಳೆ -ಯಾರು ಈ ಮಾಧವಿ ಲತಾ, ಒಟ್ಟು ಆಸ್ತಿ ಎಷ್ಟು?

ವಯಸ್ಸಿನ ಮಿತಿ :

18 ವರ್ಷದಿಂದ 25 ವರ್ಷಗಳು. ವಯೋಮಿತಿಯನ್ನು 1ನೇ ಜುಲೈ 2024 ರಿಂದ ಲೆಕ್ಕ ಹಾಕಲಾಗುತ್ತದೆ. ಕಾಯ್ದಿರಿಸಿದ ವರ್ಗಕ್ಕೆ ವಯೋಮಿತಿಯಲ್ಲಿ ಯಾವುದೇ ಸಡಿಲಿಕೆ ಇರುವುದಿಲ್ಲ.

ಇದನ್ನೂ ಓದಿ:  Camille Alexander: ತನ್ನ ಕಂಕುಳು, ಖಾಸಗಿ ಭಾಗದ ಕೂದಲು ಮಾರಿ ಲಕ್ಷ ಲಕ್ಷ ಗಳಿಸುತ್ತಾಳೆ ಈಕೆ – ಕೊಳ್ಳೋದು ಯಾರು?

ಶೈಕ್ಷಣಿಕ ಅರ್ಹತೆ :

ಗ್ರೂಪ್ D ಗಾಗಿ – 10 ನೇ ತರಗತಿ ಪಾಸ್

ಪ್ರಮುಖ ದಿನಾಂಕಗಳು :

ಅಧಿಸೂಚನೆ ಬಿಡುಗಡೆಯಾದ ದಿನಾಂಕ: 15-04- 2024

ಅರ್ಜಿ ಸ್ವೀಕಾರ ಆರಂಭ ದಿನಾಂಕ : 16-04-2024

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 16-05-2024

ಈ ಕ್ರೀಡೆಗಳಲ್ಲಿ ಸಾಧನೆ ಮಾಡಿದವರು ಅರ್ಜಿ ಸಲ್ಲಿಸಬಹುದು :

ಕಬ್ಬಡಿ

ಶೂಟಿಂಗ್

ಕುಸ್ತಿ (ಪುರುಷ) ಫ್ರೀ ಸ್ಟೈಲ್

ಪವರ್‌ಲಿಫ್ಟಿಂಗ್‌ (ಪುರುಷ)

ಪವರ್‌ಲಿಫ್ಟಿಂಗ್ (ಮಹಿಳೆ)

ಹಾಕಿ

ಕ್ರಿಕೆಟ್‌ (ಪುರುಷ)

ಕ್ರಿಕೆಟ್ (ಮಹಿಳೆ)

ಬಾಲ್ ಬ್ಯಾಡ್ಮಿಂಟನ್ (ಪುರುಷ)

ಜಿಮ್ನಾಸ್ಟಿಕ್‌ (ಪುರುಷ)

ತೂಕ ಎತ್ತುವಿಕೆ

ಆಯ್ಕೆ ಪ್ರಕ್ರಿಯೆ

ಹಂತ 1 – ಅರ್ಜಿಯ ಸ್ಟೀನಿಂಗ್ ಮತ್ತು ಪರಿಶೀಲನೆ

ಹಂತ 2 – ದಾಖಲೆ ಪರಿಶೀಲನೆ

ಹಂತ 3 – ಸ್ಪೋರ್ಟ್ಸ್ ಟ್ರಯಲ್‌

ಹಂತ 4 – ಸ್ಪೋರ್ಟ್ಸ್ ಟ್ರಯಲ್‌ನಲ್ಲಿ ಫಿಟ್ ಆಗಿರುವ ಅಭ್ಯರ್ಥಿಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಾಗುತ್ತದೆ.

ಇದರಲ್ಲಿ ಕ್ರೀಡಾ ಸಾಧನೆ ಮತ್ತು ಶೈಕ್ಷಣಿಕ ಅರ್ಹತೆಗಳನ್ನು ನೋಡಲಾಗುತ್ತದೆ. ಇದು 60 ಅಂಕಗಳನ್ನು ಹೊಂದಿರುತ್ತದೆ. ಟ್ರಯಲ್ ಕಮಿಟಿ ಮತ್ತು ನೇಮಕಾತಿ ಸಮಿತಿಯು ನೀಡುವ ಒಟ್ಟು ಅಂಕಗಳ ಆಧಾರದ ಮೇಲೆ ಅಂತಿಮ ಮೆರಿಟ್ ಪಟ್ಟಿಯನ್ನು ಮಾಡಲಾಗುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳು ಎರಡು ವರ್ಷಗಳ ಕಾಲ ಪ್ರೊಬೇಷನ್ ಅವಧಿಯಲ್ಲಿ ಇರಬೇಕಾಗುತ್ತದೆ.

You may also like

Leave a Comment