Home » Rain: ಧಾರವಾಡದಲ್ಲಿ ಮಳೆ ಆರ್ಭಟ, ನಡುರಸ್ತೆಯಲ್ಲೇ ವೃದ್ಧನ ಭಯಂಕರ ತಪಸ್ಸು…!

Rain: ಧಾರವಾಡದಲ್ಲಿ ಮಳೆ ಆರ್ಭಟ, ನಡುರಸ್ತೆಯಲ್ಲೇ ವೃದ್ಧನ ಭಯಂಕರ ತಪಸ್ಸು…!

0 comments
Rain

Rain: ಮಳೆಗಾಲ ಆರಂಭವಾಗಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಜೋರು ಮಳೆ. ಅತ್ತ ಧಾರವಾಡ ಜಿಲ್ಲೆಯಾದ್ಯಂತ ಕೂಡಾ ಮಳೆ ಅಬ್ಬರ ಜೋರಾಗಿದೆ. ಜಿಲ್ಲೆಯ ರಸ್ತೆಯಲ್ಲೆಲ್ಲ ನೀರು ನಿಂತು ಮಿನಿ ಹೊಳೆ ಸೃಷ್ಟಿಯಾಗಿದೆ. ಇದರ ಮಧ್ಯೆ ಧಾರವಾಡದ ಸಿಬಿಟಿ ಬಸ್ ನಿಲ್ದಾಣದ ಎದುರು ಹಿರಿಯ ಜೀವಿಯೊಬ್ಬರು ಮಳೆ ಬರುತ್ತಿರುವ ಸಂದರ್ಭವೇ ರಸ್ತೆ ಮಧ್ಯೆಯೇ ಘೋರ ತಪಸ್ಸಿಗೆ ಕುಳಿತ ಘಟನೆ ಕಂಡು ಬಂದಿದೆ.

Rain: ಧಾರವಾಡದಲ್ಲಿ ಮಳೆ ಆರ್ಭಟ, ನಡುರಸ್ತೆಯಲ್ಲೇ ವೃದ್ಧನ ಭಯಂಕರ ತಪಸ್ಸು…!

ಧಾರವಾಡದಲ್ಲಿ ಜೋರಾಗಿ ಬರುತ್ತಿದ್ದ ಸಂದರ್ಭ ಮಳೆಯಲ್ಲಿ ರಸ್ತೆಯಲ್ಲಿಯೇ ಕಣ್ಣು ಮುಚ್ಚಿ ವೃದ್ಧರೊಬ್ಬರು ಗಾಢ ತಪಸ್ಸು ಕೈಗೊಂಡಿದ್ದಾರೆ. ಅವರು ನಡು ರಸ್ತೆಯಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದಾರೆ. ಅತ್ತ ಇತ್ತ ಮಿಸುಕದೆ ಕಣ್ಣು ಮುಚ್ಚಿ, ಬೆನ್ನನ್ನು ನೇರವಾಗಿ ಇಟ್ಟು ಒಂಚೂರು ಅಲುಗಾಡದೆ ಮಾಡುತ್ತಿರುವ ಅಜ್ಜನ ತಪಸ್ಸು ಭಯಂಕರವಾಗಿದೆ. ಈಗ ಆಸಕ್ತ ದಾರಿಹೋಕ ಯುವಕರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.

Online Meeting: ಟಾಯ್ಲೆಟ್‌ನಲ್ಲಿ ಕುಳಿತು ಜೂಮ್‌ ಮೀಟಿಂಗ್‌ಗೆ ಅಟೆಂಡ್‌ ಆದ ಮಾಜಿ ಮೇಯರ್‌; ಮುಂದಾಗಿದ್ದು ಏನು ಗೊತ್ತಾ?

You may also like

Leave a Comment