Home » Viral Video: ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಾದ ವರುಣಾರ್ಭಟ: ಧುಮ್ಮಿಕ್ಕಿ ಹರಿಯುತ್ತಿದ್ದ ಹಳ್ಳದ ಸೇತುವೆ ದಾಟಿ ವಿಡಿಯೋ ಮಾಡಿದ ಯುವಕ!

Viral Video: ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಾದ ವರುಣಾರ್ಭಟ: ಧುಮ್ಮಿಕ್ಕಿ ಹರಿಯುತ್ತಿದ್ದ ಹಳ್ಳದ ಸೇತುವೆ ದಾಟಿ ವಿಡಿಯೋ ಮಾಡಿದ ಯುವಕ!

0 comments

Bengaluru: ಈಶಾನ್ಯ ರಾಜ್ಯಗಳಲ್ಲಿ ಮಳೆ ಬಾರಿ ಪ್ರಮಾಣದಲ್ಲಿ ಸುರಿಯುತ್ತಿದ್ದು, ಇದರ ಪರಿಣಾಮ ಭೂಕುಸಿತ, ಪ್ರವಾಹ ಉಂಟಾಗಿ ಇದುವರೆಗೂ 32 ಮಂದಿ ಮೃತ ಪಟ್ಟಿದ್ದಾರೆ.

ಇನ್ನೂ ಅರುಣಾಚಲ ಪ್ರದೇಶದಲ್ಲಿ ತೀವ್ರವಾಗಿ ಮಳೆ ಸುರಿಯುತ್ತಿದ್ದು, ಹಳ್ಳ ಕೊಳ್ಳಗಳು ಭರ್ತಿಯಾಗಿವೆ. ಇದರ ಚೀನಾ ಗಡಿಯಲ್ಲಿರುವ ಅಂಜ್ವಾ ಜಿಲ್ಲೆಯಲ್ಲಿ ಜೋರಾಗಿ ಹರಿಯುತ್ತಿರುವ ಹಳ್ಳವೊಂದರ ಹಲಗೆಯ ಮೇಲೆ ನಿಂತು ಸ್ಟಂಟ್ ಮಾಡುತ್ತ ವಿಡಿಯೋ ಮಾಡಲು ಹೋದ ಯುವಕನೊಬ್ಬ ಪ್ರಾಣಾಪಾಯ ತಂದುಕೊಂಡಿರುವ ಘಟನೆಯೊಂದು ನಡೆದಿದೆ.

ಇದೀಗ ಈ ವಿಡಿಯೋ ವೈರಲ್ ಆಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸುತ್ತಿದೆ ಹಾಗೂ ಈ ವಿಡಿಯೋವನ್ನು ಹಂಚಿಕೊಂಡಿರುವ ಕೇಂದ್ರ ಸಚಿವ ಹಾಗೂ ಅರುಣಾಚಲ ಪ್ರದೇಶದ ಸಂಸದ ಕಿರಣ್ ರಿಜಿಜು ಸುರಕ್ಷಿತವಾಗಿರುವಂತೆ ತಿಳಿಸಿದ್ದಾರೆ.

ಇನ್ನೂ ಈಶಾನ್ಯ ರಾಜ್ಯಗಳಾದ ಅಸ್ಸಾಂ,ತ್ರಿಪುರ, ಮಣಿಪುರ, ಸಿಕ್ಕಿಂ, ಅರುಣಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇಲ್ಲಿನ 10 ಪ್ರಮುಖ ನದಿಗಳು ಅಪಾಯ ಮಟ್ಟಕ್ಕೂ ಮೀರಿ ಹರಿಯುತ್ತಿರುವುದು ಇಲ್ಲಿಯ 15 ಜಿಲ್ಲೆಯಲ್ಲಿನ 78 ಸಾವಿರಕ್ಕೂ ಹೆಚ್ಜಿನ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವರದಿಯಾಗಿದೆ.

You may also like