Home » ರೈತರ ಕೃಷಿ ನಿರ್ನಾಮ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವ್ಯವಸ್ಥಿತ ಕಾರ್ಯತಂತ್ರ – ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವಿಜಯನಗರ

ರೈತರ ಕೃಷಿ ನಿರ್ನಾಮ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವ್ಯವಸ್ಥಿತ ಕಾರ್ಯತಂತ್ರ – ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವಿಜಯನಗರ

0 comments

ಹೊಸಪೇಟೆ : ರೈತರು, ರೈತರ ಕೃಷಿ ನಿರ್ನಾಮ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವ್ಯವಸ್ಥಿತ ಕಾರ್ಯತಂತ್ರ ಅನುಸರಿಸುತ್ತಿವೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಹೇಳಿದರು.ಈ ಕುರಿತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಜಿಲ್ಲಾ ಘಟಕವನ್ನು ಘೋಷಣೆ ಮಾಡಿದ ಅವರು ಮಾತನಾಡಿ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಲು ವಿಫಲವಾಗಿವೆ.ರಸಗೊಬ್ಬರ ದರ, ಬೆಳೆಗಳಿಗೆ ವೈಜ್ಞಾನಿಕ ದರ ನೀಡದೆ ತನ್ನಿಂದತಾನೆ ಕೃಷಿ ಬಿಡುವಂತೆ ಮಾಡುತ್ತಿದೆ ಎಂದು ಆರೋಪಿಸಿದರು.

ನನ್ನ ಬೆಳೆ, ನನ್ನ ಬೆಲೆ ಮತ್ತು ನನ್ನ ಹಕ್ಕು ವಿದ್ಯುತ್, ಬ್ಯಾಂಕ್ ಗಳ ಸಾಲ ಹಾಗೂ ಬಡ್ಡಿಯ ವೃದ್ದಿಯಾಗುವಂತೆ ಬೆಲೆಗಳು ಬದಲಾಗಬೇಕು ಎಂಬ ಕಾರಣಕ್ಕೆ ಬಡವರು ನಗರಗಳತ್ತ ಮುಖಮಾಡಿರುವುದನ್ನು ತಪ್ಪಿಸಲು ಹಳ್ಳಿಗಳು ಸರ್ಕಾರ ಬೆಳೆ ಖರೀದಿಗೆ ಹಳ್ಳಿಗಳತ್ತ ಮೂಖ ಮಾಡುವಂತೆ ಮಾಡಲು ಈ ಚಳುವಳಿ ಆರಂಭಿಸಲು ನಿರ್ಧರಿಸಲಾಗಿದೆ. ಇನ್ನೂ ಮುಂದಿ ಬ್ಯಾಂಕ್ ಗಳಿ ನಮ್ಮ ದರದಲ್ಲಿ ಬೆಳೆ ನೀಡಲು ಮುಂದಾಗವಂತೆ ಮಾಡಲು ಆಂದೋಲನ ಆರಂಭಿಸಲಿವೆ ಎಂದರು.ರಾಜ್ಯ ಕಾರ್ಯಾಧ್ಯಕ್ಷ ಇಚುಗಟ್ಟದ ಸಿದ್ದವೀರಪ್ಪ, ಜಿಲ್ಲಾ ಅಧ್ಯಕ್ಷರಾಗಿ ದಾನೇಶ ಕಾರಿಗನೂರ ಉಪಾಧ್ಯಕ್ಷ ನಾಗಪ್ಪ, ಹಡಗಲಿ ತಾಲೂಕು ಅಧ್ಯಕ್ಷ ಚನ್ನಬಸಪ್ಪ, ಕೊಟ್ಟೂರು ಚನ್ನಬಸಪ್ಪ, ಜಿಲ್ಲಾ ಸಮಿತಿಯ ಜೀರ ಪ್ರಕಾಶ ಕಾರಿಗನೂರ, ಅಂಕಲೇಶ್ ಮತ್ತು ರಾಜಣ್ಣ ಹಾಜರಿದ್ದರು.

You may also like

Leave a Comment