Rishab Shetty: ಕಾಂತರಾ ಚಾಪ್ಟರ್ 1 ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಒಂದೇ ದಿನದಲ್ಲಿ ಹಲವು ಭಾಷೆಗಳಲ್ಲಿ ಲಕ್ಷಾಂತರ ಹಾಗೂ ಕೋಟ್ಯಾಂತರ ವ್ಯೂಸ್‌ಗಳನ್ನು ಇದು ಪಡೆದುಕೊಂಡಿದೆ. ಇದರ ಬೆನ್ನಲ್ಲೇ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಅವರು ಸುದ್ದಿಗೋಷ್ಠಿ ನಡೆಸಿ ಸಿನಿಮಾ ಕುರಿತು ಹಲವು ಕುತೂಹಲದ ಅಂಶಗಳನ್ನು ಹಂಚಿಕೊಂಡಿದ್ದಾರೆ.
ಹೌದು, ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು ಸಾಕಷ್ಟು ಜನರಿಗೆ ತಲುಪಿದೆ. ಇದರಿಂದ ಚಿತ್ರದ ಬಗ್ಗೆ ನಿರೀಕ್ಷೆ ಕೂಡ ಹೆಚ್ಚಾಗಿದೆ. ಈಗ ರಿಷಬ್ ಅವರು ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ರಿವೀಲ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ ಬಿ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಅವರ ಕುರಿತು ರಿಷಬ್ ಮಾತನಾಡಿದ್ದಾರೆ..
ಈ ಕುರಿತು ಮಾತನಾಡಿದ ಅವರು ‘ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ರಕ್ಷಿತ್ ಆಗಲಿ, ರಾಜ್ ಆಗಲಿ ಬರವಣಿಗೆಯಲ್ಲಿ ಪಾಲ್ಗೊಂಡಿಲ್ಲ. ಅವರು ಅವರದ್ದೇ ಆದ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದರು’ ಎಂದು ರಿಷಬ್ ಅವರು ಹೇಳಿಕೆ ನೀಡಿದ್ದಾರೆ. ಈ ಚಿತ್ರದಲ್ಲಿ ‘ಸು ಫ್ರಮ್ ಸೋ’ ರವಿಯಣ್ಣ ಪಾತ್ರ ಮಾಡಿರೋ ಶನೀಲ್ ಅವರು ಬರವಣಿಗೆಯ ಭಾಗವಾಗಿದ್ದಾರೆ.
ಅಲ್ಲದೆ ‘ಕಾಂತಾರ (Kantara Prequel) ಸೆಟ್ನಲ್ಲಿ ಹಾಗಾಯ್ತು, ಹೀಗಾಯ್ತು ಅಂತ ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿತ್ತು. ಲೆಕ್ಕ ಹಾಕಿದರೆ ನಾಲ್ಕು ಅಥವಾ ಐದು ಸಲ ನಾನು ಹೋಗಿಯೇ ಬಿಡುತ್ತಿದ್ದೆ. ಆದರೆ ನಾನು ಇಂದು ಬದುಕಿ ಬಂದು ನಿಮ್ಮ ಮುಂದೆ ನಿಂತಿದ್ದೇನೆ. ಅದಕ್ಕೆ ನಮ್ಮ ಹಿಂದಿರುವ ದೈವ ಕಾರಣ ಎಂಬುದು ನನ್ನ ನಂಬಿಕೆ. ಇಡೀ ತಂಡದ ಪ್ರತಿಯೊಬ್ಬರಿಗೆ ದೈವ ಆಶೀರ್ವಾದ ಮಾಡಿದೆ’ ಎಂದಿದ್ದಾರೆ.
