Home » Rajani Kanth: ಸಿನಿಮಾ ಜೀವನಕ್ಕೆ ರಜನಿಕಾಂತ್ ವಿದಾಯ?

Rajani Kanth: ಸಿನಿಮಾ ಜೀವನಕ್ಕೆ ರಜನಿಕಾಂತ್ ವಿದಾಯ?

0 comments

Rajani Kanth: ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು ತಮ್ಮ ಸುದೀರ್ಘ 50 ವರ್ಷಗಳ ಸಿನಿ ಜಗತ್ತಿನ ಬದುಕಿಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಮೂಲಗಳ ಪ್ರಕಾರ, ಈ ವರ್ಷ ಅವರ ಸಿನಿಮಾ ವೃತ್ತಿ ಜೀವನದ ಕೊನೆಯ ಅಧ್ಯಾಯವಾಗುವ ಸಾಧ್ಯತೆ ಇದೆ. ನಟ ಕಮಲ್‌ ಹಾಸನ್‌ ಅವರ ಜತೆಗಿನ ಬಹುನಿರೀಕ್ಷಿತ ಸಿನಿಮಾ ಚಿತ್ರೀಕರಣ ಪೂರ್ಣಗೊಂಡ ನಂತರ ನಿರ್ದೇಶಕ ಸುಂದರ ಸಿ ಅವರ ಹೆಸರಿಡದ ಹಾಸ್ಯ ಚಿತ್ರದಲ್ಲಿನ ನಟನೆಯ ನಂತರ ರಜನಿಕಾಂತ್‌ ಅವರು ನಿವೃತ್ತಿಯಾಗಲಿದ್ದಾರೆ ಎಂದು ತಿಳಿಸಿದೆ. ರಜನಿಕಾಂತ್ ಅವರು 2027ರವರೆಗೆ ಬಿಡುವಿಲ್ಲದೆ ಚಿತ್ರೀಕರಣದಲ್ಲಿ ಭಾಗವಹಿಸುವಷ್ಟು ಕೆಲಸಗಳು ಕೈಯಲ್ಲಿವೆ. ಇಷ್ಟೆಲ್ಲಾ ಪ್ರಾಜೆಕ್ಟ್‌ಗಳು ಸಾಲುಗಟ್ಟಿ ನಿಂತಿರುವಾಗಲೇ, ಸೂಪರ್‌ಸ್ಟಾರ್ ಅವರು ನಿವೃತ್ತಿ ತೆಗೆದುಕೊಳ್ಳುವ ಮಾತುಗಳು ಕೇಳಿಬರುತ್ತಿರುವುದು ಅಚ್ಚರಿ ಮೂಡಿಸಿದೆ.

ರಜನಿಕಾಂತ್ ಆಪ್ತ ಬಳಗದ ಮಾಹಿತಿಯ ಪ್ರಕಾರ, ಅವರಿಗೆ ವಯಸ್ಸು ಹೆಚ್ಚುತ್ತಿರುವುದಿಂದ ದೈಹಿಕ ಶ್ರಮ ಹಾಕುವ ಪಾತ್ರಗಳನ್ನು ನಿರ್ವಹಿಸಲು ಕಷ್ಟವಾಗುತ್ತಿದೆ. ಹಾಗಾಗಿ ಅವರು ತಮ್ಮ ಕುಟುಂಬ ಸದಸ್ಯರ ಜೊತೆಗೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನೂ ರಜನಿಕಾಂತ್ ಕುರಿತು ನಿವೃತ್ತಿ ಸುದ್ದಿ ಕೇಳಿಬರುತ್ತಿರುವುದು ಇದೇ ಮೊದಲಲ್ಲ. ಹಿಂದೆ ರಾಜಕೀಯ ಪ್ರವೇಶದ ಸಂದರ್ಭದಲ್ಲಿಯೂ ಅವರು ಚಿತ್ರರಂಗಕ್ಕೆ ವಿದಾಯ ಹೇಳುವ ನಿರ್ಧಾರ ಮಾಡಿದ್ದರು, ಆದರೆ ಆರೋಗ್ಯದ ಕಾರಣದಿಂದ ರಾಜಕೀಯದಿಂದ ಹಿಂದೆ ಸರಿದು ಮತ್ತೆ ನಟನೆಯನ್ನು ಮುಂದುವರೆಸಿದ್ದರು. ಒಟ್ಟಿನಲ್ಲಿ ಈ ಚರ್ಚೆ ಇದೀಗ ಮತ್ತೆ ಮುನ್ನಲೆಗೆ ಬಂದಿದ್ದು ತಾವು ಸಿನಿಮಾ ಜೀವನದಿಂದ ನಿವೃತ್ತಿ ಆಗುತ್ತಿರುವ ಬಗ್ಗೆ ಸದ್ಯಕ್ಕೆ ಯಾವುದೇ ಅಧಿಕೃತ ಹೇಳಿಕೆಯನ್ನ ನೀಡಿಲ್ಲ.

You may also like