Home » Ram Gopal Varma: ‘ಅಮಿತಾಭ್ ಬಚ್ಚನ್ ಅವರ ಸಿನಿಮಾಗಳನ್ನು ರಿಮೇಕ್ ಮಾಡಿ ರಾಜಕುಮಾರ್ ಫೇಮಸ್ ಆದ್ರು’ – ನಾಲಗೆ ಹರಿಬಿಟ್ಟ ರಾಮ ಗೋಪಾಲ್ ವರ್ಮಾ

Ram Gopal Varma: ‘ಅಮಿತಾಭ್ ಬಚ್ಚನ್ ಅವರ ಸಿನಿಮಾಗಳನ್ನು ರಿಮೇಕ್ ಮಾಡಿ ರಾಜಕುಮಾರ್ ಫೇಮಸ್ ಆದ್ರು’ – ನಾಲಗೆ ಹರಿಬಿಟ್ಟ ರಾಮ ಗೋಪಾಲ್ ವರ್ಮಾ

by V R
0 comments

Ram Gopal Varma: ಕನ್ನಡ ಭಾಷೆ ಹಾಗೂ ಕನ್ನಡದ ನಟ ನಟಿಯರ ಕುರಿತಾಗಿ ಅನ್ಯ ಭಾಷೆಯ ನಟರು, ನಿರ್ದೇಶಕರು ಬೇಕಾಬಿಟ್ಟಿ ಮಾತನಾಡುವುದು ಅಥವಾ ನಾಲಗೆ ಹರಿಬಿಡುವುದು ಅವರಿಗೆ ಅಭ್ಯಾಸವಾದಂತೆ ಕಾಣುತ್ತಿದೆ. ಇತ್ತೀಚಿಗಷ್ಟೇ ನಟ ಕಮಲ್ ಹಾಸನ್ ಕನ್ನಡದ ಹುಟ್ಟಿನ ಬಗ್ಗೆ ಯುವದಾತ್ಮಕ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ‘ಅಮಿತಾಭ್ ಬಚ್ಚನ್ ಸಿನಿಮಾ ರಿಮೇಕ್ ಮಾಡಿ ಅಣ್ಣಾವ್ರು ಫೇಮಸ್ ಆದ್ರು’ ಎಂದು ರಾಮ್ ಗೋಪಾಲ್ ವರ್ಮಾ ನಾಲಿಗೆ ಹರಿಬಿಟ್ಟಿದ್ದಾರೆ.

ಹೌದು, ಸಂದರ್ಶನವೊಂದರಲ್ಲಿ ರಾಮ್ ಗೋಪಾಲ್ ವರ್ಮಾ ಅವರು ’70-80 ರ ದಶಕದಲ್ಲಿ ಅಮಿತಾಭ್ ಬಚ್ಚನ್ ಅವರ ಸಿನಿಮಾಗಳನ್ನು ರಿಮೇಕ್ ಮಾಡಿ ಅನೇಕರು ಹೆಸರು ಮಾಡಿದರು. ರಜನೀಕಾಂತ್, ಚಿರಂಜೀವಿ, ರಾಜ್ ಕುಮಾರ್ ಅವರಂತಹ ನಟರು ಈ ರಿಮೇಕ್ ಗಳ ಮೂಲಕ ಜನಪ್ರಿಯತೆ ಪಡೆದರು. 90 ರ ದಶಕದಲ್ಲಿ ಬಚ್ಚನ್ ಐದು ವರ್ಷ ಬ್ರೇಕ್ ತೆಗೆದುಕೊಂಡರು. ಆಗ ದಕ್ಷಿಣದ ನಟರು ಅವರ ಸಿನಿಮಾಗಳಂತೆ ಮಸಾಲಾ ರೀತಿಯಲ್ಲಿ ಕತೆ ಹೇಳುವುದನ್ನು ಮುಂದುವರಿಸಿದರು’ ಎಂದಿದ್ದಾರೆ.

‘ಡಾ ರಾಜ್ ಪೌರಾಣಿಕ ಕತೆಗಳು, ಕಾದಂಬರಿ ಆಧಾರಿತ ಕತೆಗಳ ಸಿನಿಮಾಗಳನ್ನೇ ಮಾಡುತ್ತಿದ್ದವರು. ಅವರ ಬಗ್ಗೆ ಇಂತಹ ಕ್ಷುಲ್ಲುಕ ಹೇಳಿಕೆ ನೀಡಿರುವ ರಾಮ್ ಗೋಪಾಲ್ ವರ್ಮಾ ಅವರ ಹೇಳಿಕೆಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

You may also like