Home » Udupi: ಕುಟುಂಬದ ಹರಕೆಯ ಕೋಲದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ!

Udupi: ಕುಟುಂಬದ ಹರಕೆಯ ಕೋಲದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ!

0 comments

Udupi: ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್, ಕರಾವಳಿ ಮೂಲದ ನಟ ರಕ್ಷಿತ್ ಶೆಟ್ಟಿ, ಅಪಾರ ದೈವಭಕ್ತಿ ಹೊಂದಿರುವ ಇವರು ತನ್ನ ಕುಟುಂಬದ ಹರಕೆಯ ಕೋಲದಲ್ಲಿ ಭಾಗಿಯಾಗಿ ದೈವದ ಆಶೀರ್ವಾದ ಪಡೆದುಕೊಂಡಿದ್ದಾರೆ.

ರಕ್ಷಿತ್ ಅಲೆಯೂರು ದೊಡ್ಡ ಮನೆ ಕುಟುಂಬಕ್ಕೆ ಸೇರಿದ್ದು ಹಿಂದಿನಿಂದಲೂ ಇಲ್ಲಿ ಹರಕೆಯ ನೇಮೋತ್ಸವ ನಡೆದುಕೊಂಡು ಬಂದಿದೆ. ಮೂಲ ಮೈಸಂದಾಯ, ಸಾವಿರಾಳು ಜುಮಾದಿ, ಜೋಡು ಪಂಜುರ್ಲಿ ದೈವದ ನೇಮದಲ್ಲಿ ಇವರು ಭಾಗಿಯಾಗಿದ್ದಾರೆ.

ಕುಟುಂಬ ಸಮೇತರಾಗಿ ದೈವದ ಕೋಲದಲ್ಲಿ ಭಾಗಿಯಾದ ಅವರು ದೈವದ ಕೈಯಿಂದ ಗಂಧ ಪ್ರಸಾದವನ್ನು ಸ್ವೀಕರಿಸಿದ್ದಾರೆ. ಎಲ್ಲವೂ ಒಳ್ಳೆಯದಾಗುತ್ತದೆ ಎಂದು ದೈವ ಅಭಯದ ನುಡಿ ಕೊಟ್ಟಿದೆ.

You may also like