Ramalinga Reddy: ಮೂಡಾ ಕೇಸ್‌ನಲ್ಲಿ ತಮ್ಮ ವಿರುದ್ಧ ನೀಡಿದ್ದ ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನೆ ಮಾಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದ ಸಿಎಂ ಅವರಿಗೆ ಇಂದು ಹೈಕೋರ್ಟ್ ಆದೇಶ ಹಿನ್ನೆಡೆ ನೀಡಿದೆ. ಈ ಕುರಿತು ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ” ದೇಶದ ಬಗ್ಗೆ ನಮಗೆ ಗೌರವವಿದೆ. ಆದರೆ ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡೋದಿಲ್ಲ” ಎಂದು ಹೇಳಿದ್ದಾರೆ.
ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದು, ಸಿಂಗಲ್ ಬೆಂಚ್‌ನಲ್ಲಿ ಅನುಮತಿ ಕೊಟ್ಟಿದ್ದಾರೆ. ಇನ್ನು ಡಬಲ್ ಬೆಂಚ್ ಇದೆ. ನ್ಯಾಯಾಂಗದ ಮೇಲೆ ನಮಗೆ ನಂಬಿಕೆ ಇದೆ. 17A ಮೂಲಕ ಅನುಮತಿ ಕೊಟ್ಟಿದ್ದಾರೆ. ನಾವು ಡಬಲ್ ಬೆಂಚ್‌ನಲ್ಲಿ ಚಾಲೆಂಜ್ ಮಾಡುತ್ತೇವೆ ಎಂದು ಹೇಳಿದ್ದಾರೆ.
ಸಿಎಂ ಜೊತೆ ನಾವೆಲ್ಲರೂ ಇದ್ದೇವೆ. ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ. ಬಿಜೆಪಿಯವರು ನಮ್ಮ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಅಗತ್ಯ ಇರಲಿಲ್ಲ. ಈಗ ಅನುಮತಿ ಕೊಟ್ಟಿದ್ದು, ಕೋರ್ಟ್ ತೀರ್ಪಿಗೆ ನಾವು ಗೌರವ ನೀಡುತ್ತೇವೆ. ಡಬಲ್ ಬೆಂಚ್ ನಂತರ ಸುಪ್ರೀಂ ಕೋರ್ಟ್ ಇದೆ. ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
