Home » Ramanagara: ಕರ್ನಾಟಕದ ಈ ಮಠಕ್ಕೆ ಬರೋಬ್ಬರಿ 3 ಸಾವಿರ ಎಕರೆ ಜಮೀನು ದಾನ ಮಾಡಿದ ರಾಜಸ್ಥಾನದ ಉದ್ಯಮಿ!! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

Ramanagara: ಕರ್ನಾಟಕದ ಈ ಮಠಕ್ಕೆ ಬರೋಬ್ಬರಿ 3 ಸಾವಿರ ಎಕರೆ ಜಮೀನು ದಾನ ಮಾಡಿದ ರಾಜಸ್ಥಾನದ ಉದ್ಯಮಿ!! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

0 comments

Ramanagara: ಅಂದು ಒಂದು ತುಂಡು ಭೂಮಿಗಾಗಿ ಅದೆಷ್ಟೋ ಕೊಲೆಗಳು, ಅದೆಷ್ಟೋ ರಕ್ತಪಾತಗಳು ನಡೆದಿವೆ, ನಡೆಯುತ್ತಲೇ ಇವೆ. ಹೀಗಿರುವಾಗಲೇ ಇಲ್ಲೊಬ್ಬರು ಮಠಕ್ಕೆ (Math) ತಮ್ಮ ಜಮೀನನ್ನು ದಾನವಾಗಿ ನೀಡಿದ್ದಾರೆ. ಅದೂ ಒಂದೆರಡು ಎಕರೆ ಅಲ್ಲ, ಬರೋಬ್ಬರಿ 3 ಸಾವಿರ ಎಕರೆ ಭೂಮಿಯನ್ನು ಮಠಕ್ಕೆ ದಾನವಾಗಿ ನೀಡಿದ್ದಾರೆ.

ರಾಜಸ್ಥಾನದ(Rajasthan) ಪ್ರಖ್ಯಾತ ಗಣಿ ಉದ್ಯಮಿ ಓಸ್ವಾಲ್‌ ಜೈನ್‌( Oswal Jain) ಅವರ ಹೆಸರನ್ನು ಹೆಚ್ಚಿನವರು ಕೇಳಿದ್ದಾರೆ. ರಾಜಸ್ಥಾನ ಮಾತ್ರವಲ್ಲದೆ, ಮುಂಬೈ, ಗುಜರಾತ್‌, ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಅವರ ಹೆಸರಲ್ಲಿ ಇದ್ದಿದ್ದು ಬರೋಬ್ಬರಿ 3 ಸಾವಿರ ಎಕರೆಯ ಭೂಮಿ. ಇದರಲ್ಲಿ ಕಲ್ಲಿದ್ದಲು, ಚಿನ್ನ ಹಾಗೂ ಅದಿರಿನ ಗಣಿಗಾರಿಕೆ ಮಾಡುತ್ತಿದ್ದರು. ಅದರೊಂದಿಗೆ ಜರ್ಮನಿ, ಜಪಾನ್‌ ಹಾಗೂ ಆಸ್ಟ್ರೇಲಿಯಾದಲ್ಲಿ ನಡೆಸುತ್ತಿದ್ದ ಎಲ್ಲಾ ವಿದೇಶಿ ವಹಿವಾಟುಗಳಿದ್ದವು. ಈ ಎಲ್ಲವನ್ನೂ ಓಸ್ವಾಲ್‌ ಜೈನ್‌, ರಾಮನಗರ(Ramanagar) ಜಿಲ್ಲೆಯ ಮಾಗಡಿಯಲ್ಲಿರುವ ಪಾಲನಹಳ್ಳಿ ಮಠಕ್ಕೆ(Palanahalli Math) ದಾನ ಮಾಡಿದ್ದಾರೆ.

ಹೌದು, 78 ವರ್ಷದ ಓಸ್ವಾಲ್‌ ಜೈನ್‌ ಇಷ್ಟು ದೊಡ್ಡ ಪ್ರಮಾಣದ ಜಮೀನನ್ನು ದಾನ ಮಾಡಿ ಸಂನ್ಯಾಸತ್ವ ಸ್ವೀಕಾರ ಮಾಡಿದ್ದಾರೆ. ಜೀವನದ ಸಂಧ್ಯಾಕಾಲದಲ್ಲಿ ಎಲ್ಲವನ್ನು ಬಿಟ್ಟು ನೆಮ್ಮದಿಯಾಗಿ ಇರಬೇಕೆಂದು ಇವರು ತನ್ನ 3 ಸಾವಿರ ಎಕರೆ ಭೂಮಿಯನ್ನ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ನೆಲಮಂಗಲ ಬಳಿಯಿರುವ ಪಾಲನಹಳ್ಳಿ ಮಠಕ್ಕೆ ದಾನ ಮಾಡಿದ್ದಾರೆ. ಎನ್ನಲಾಗಿದೆ.

ರಾಜಸ್ಥಾನದ ಗಣಿ ಉದ್ಯಮಿಯಾಗಿರುವ ಓಸ್ವಾಲ್‌ ಜೈನ್‌ಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ವಿದೇಶದಲ್ಲಿದ್ದರೆ, ಮಗಳು ರಾಜಸ್ಥಾನದಲ್ಲಿ ಸಿಎ ವೃತ್ತಿಯಲ್ಲಿದ್ದಾಳೆ. ಇಬ್ಬರೂ ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿ ನೀಡಿರುವ ಓಸ್ವಾಲ್‌ ಜೈನ್‌, ತಾವು ಬದುಕಿನಲ್ಲಿ ದುಡಿದು ಗಳಿಸಿದ ಸ್ವಯಾರ್ಜಿತ ಆಸ್ತಿಯಾಗಿರುವ 3 ಸಾವಿರ ಎಕರೆ ಆಸ್ತಿಯನ್ನು ಮಾತ್ರವೇ ದಾನ ಮಾಡಿದ್ದಾರೆ. ಓಸ್ವಾಲ್‌ ಜೈನ್‌ ಪಾಲನಹಳ್ಳಿ ಮಠದ ಪೀಠಾಧ್ಯಕ್ಷರಾದ ಡಾ. ಸಿದ್ದರಾಜ ಸ್ವಾಮೀಜಿಗೆ ಆಸ್ತಿ‌ ಪತ್ರ ಹಸ್ತಾಂತರಿಸಿದ್ದಾರೆ. ಕಾನೂನಾತ್ಮಕವಾಗಿ ಆಸ್ತಿ ಹಸ್ತಾಂತರ ಮಾಡಿರೋ ಉದ್ಯಮಿ ಪಿ.ಬಿ. ಓಸ್ವಾಲ್‌ ಜೈನ್, ಕಳೆದ 27 ವರ್ಷಗಳಿಂದ ಪಾಲನಹಳ್ಳಿ ಮಠದ ಜೊತೆ ಒಡನಾಟ ಹೊಂದಿದ್ದರು ಎನ್ನಲಾಗಿದೆ.

ಅಂದಹಾಗೆ ಈ ಉದ್ಯಮಿ ನೀಡಿರುವ ಭೂಮಿಯಲ್ಲಿ ಈಗಾಗಲೇ ಗಣಿಗಾರಿಕೆ ನಡೆಯತ್ತಿದ್ದು, ಇದರಲ್ಲಿ ಬರುವ ಆದಾಯದಿಂದ ಆಸ್ಪತ್ರೆ, ಗೋಶಾಲೆ, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಲೋಕ ಕಲ್ಯಾಣಕ್ಕೆ ಮತ್ತು ಸಮಾಜ ಸೇವೆಗೆ ಬಳಸುವುದು ಮಠದ ಉದ್ದೇಶವಾಗಿದೆ” ಎಂದು ಪಾಲನಹಳ್ಳಿ ಮಠದ ಪೀಠಾಧ್ಯಕ್ಷರಾದ ಡಾ. ಸಿದ್ದರಾಜ ಸ್ವಾಮೀಜಿ ಹೇಳಿದ್ದಾರೆ. ಒಟ್ಟಾರೆ ಮಠಕ್ಕೆ ತನ್ನ ಪೂರ್ಣ ಆಸ್ತಿಯನ್ನ ದಾನ ಮಾಡಿರುವುದಾಗಿ ಹೇಳಿಕೆ ನೀಡಿರುವ ದಾನಿಯ ನಡೆ ನಿಜಕ್ಕೂ ಆಶ್ಚರ್ಯ ತಂದಿದೆ. ಮಠಕ್ಕೆ ಸಾವಿರಾರು ಕೋಟಿ ಆಸ್ತಿ ಕೈ ಸೇರಿರುವುದು ಸಹ ಭಕ್ತರಲ್ಲಿಯೂ ಅಚ್ಚರಿತಂದಿದೆ.

You may also like

Leave a Comment