Home » Ramanagara: ಉಚಿತ ಸೀರೆಗೆ ಮುಗಿಬಿದ್ದ ಮಹಿಳೆಯರು; ಭಾರೀ ನೂಕಾಟ ತಳ್ಳಾಟ, ಓರ್ವ ಮಹಿಳೆಯ ಕೈ ಮುರಿತ!

Ramanagara: ಉಚಿತ ಸೀರೆಗೆ ಮುಗಿಬಿದ್ದ ಮಹಿಳೆಯರು; ಭಾರೀ ನೂಕಾಟ ತಳ್ಳಾಟ, ಓರ್ವ ಮಹಿಳೆಯ ಕೈ ಮುರಿತ!

0 comments

Ramanagara: ರಾಮನಗರದಲ್ಲಿ ಗುರುವಾರ ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಉಚಿತವಾಗಿ ಸೀರೆ ವಿತರಿಸುವ ಕಾರ್ಯಕ್ರಮವಿದ್ದು, ತಳ್ಳಾಟ ನೂಕಾಟ ಉಂಟಾಗಿದೆ.

ಉಚಿತ ಸೀರೆಗೆಂದು ಮಹಿಳೆಯರು ಮುಗಿಬಿದ್ದಿದ್ದು, ಸಾವಿರಾರು ಮಹಿಳೆಯರು ನಾ ಮುಂದು ತಾ ಮುಂದು ಎಂದು ಮುಂದೆ ಬಂದಿದ್ದು, ಈ ಸಂದರ್ಭದಲ್ಲಿ ತಳ್ಳಾಟ, ನೂಕಾಟ ಉಂಟಾಗಿ ಓರ್ವ ಮಹಿಳೆಯ ಕೈ ಮುರಿದು, ಹಲವರು ಪೆಟ್ಟು ಮಾಡಿಕೊಂಡಿದ್ದಾರೆ.

ಕಾಂಗ್ರೆಸ್‌ ಶಾಸಕ ಇಕ್ಬಾಲ್‌ ಹುಸೇನ್‌ ನೇತೃತ್ವದಲ್ಲಿ ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ, ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಾಗೂ ಈ ಕಾರ್ಯಕ್ರಮಕ್ಕೆ ಬಂದಿದ್ದ ಸಾವಿರಾರು ಮಹಿಳೆಯರಿಗೆ ಉಚಿತವಾಗಿ ಸೀರೆ ಹಂಚಲಾಯಿತು.

ಈ ಹಿನ್ನೆಲೆಯಲ್ಲಿ ತಳ್ಳಾಟ, ನೂಕಾಟ ನಡೆದಿದ್ದು, ಓರ್ವ ಮಹಿಳೆ ಕೈ ಮುರಿದು ಕೊಂಡಿರುವ ಘಟನೆ ನಡೆದಿದೆ.

You may also like